alex Certify ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್: ಜುಲೈನಲ್ಲಿ ಡಿಎ ಹೆಚ್ಚಳ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರ ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್: ಜುಲೈನಲ್ಲಿ ಡಿಎ ಹೆಚ್ಚಳ ಸಾಧ್ಯತೆ

ದೇಶದಲ್ಲಿ ಹಣದುಬ್ಬರ ಏರಿಕೆಯಾಗುತ್ತಿರುವ ಕಾರಣ, ಈ ತಿಂಗಳ ಅಂತ್ಯದ ವೇಳೆಗೆ ಸರ್ಕಾರಿ ನೌಕರರ ತುಟ್ಟಿಭತ್ಯೆ (ಡಿಎ) ಹೆಚ್ಚಿಸುವ ಸಾಧ್ಯತೆಯಿದೆ. ಅಖಿಲ-ಭಾರತೀಯ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ) ಆಧಾರದ ಮೇಲೆ ಸರ್ಕಾರಿ ನೌಕರರ ಡಿಎಯನ್ನು ವರ್ಷಕ್ಕೆ ಎರಡು ಸಲ ಜನವರಿ ಮತ್ತು ಜುಲೈನಲ್ಲಿ ಪರಿಷ್ಕರಿಸಲಾಗುತ್ತದೆ. ಈ ಬಾರಿ, ಎಐಸಿಪಿಐ 127 ಅಂಕಗಳ ಮೇಲಿದ್ದು, ಡಿಎ ಶೇಕಡ 5 ಹೆಚ್ಚಾಗಿ ಶೇಕಡ 39ಕ್ಕೆ ತಲುಪಬಹುದು ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಜನವರಿಯಲ್ಲಿ, 7 ನೇ ವೇತನ ಆಯೋಗದ ಅಡಿಯಲ್ಲಿ ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ ಹಿಂದಿನ ಶೇಕಡ 31 ರ ದರದಿಂದ ಶೇಕಡ 34 ಕ್ಕೆ ಏರಿಸಿತ್ತು. ಏಪ್ರಿಲ್‌ನಲ್ಲಿ ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿದ ಚಿಲ್ಲರೆ ಹಣದುಬ್ಬರವು ಎಂಟು ವರ್ಷಗಳ ಗರಿಷ್ಠ ಶೇಕಡಾ 7.79‌ ಕ್ಕೆ ತಲುಪಿದೆ. ಅದಕ್ಕೂ ಮೊದಲು, ಜುಲೈ 2021 ರಲ್ಲಿ, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಕ್ರಮವಾಗಿ ಡಿಎ ಮತ್ತು ತುಟ್ಟಿಭತ್ಯೆ (ಡಿಆರ್) ಅನ್ನು ಕೇಂದ್ರವು ದೀರ್ಘ ವಿರಾಮದ ನಂತರ ಶೇಕಡ 17ರಿಂದ ಶೇಕಡ 28ಕ್ಕೆ ಹೆಚ್ಚಿಸಿತು.

ಖರೀದಿಸಿದ್ದಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಇಂಧನ ಮಾರಾಟ…! ಇದರ ಹಿಂದಿದೆ ಒಂದು ಉನ್ನತ ಉದ್ದೇಶ

ನಂತರ 2021ರ ಅಕ್ಟೋಬರ್ ನಲ್ಲಿ, ಕೇಂದ್ರ ಸರ್ಕಾರವು ಮತ್ತೊಮ್ಮೆ ಡಿಎಯನ್ನು ಶೇಕಡ 3 ಹೆಚ್ಚಿಸಿತು. ನಂತರ, 2021ರ ಜುಲೈನಿಂದ ಜಾರಿಗೆ ಬರುವಂತೆ ಕೇಂದ್ರ ಸರ್ಕಾರಿ ನೌಕರರಿಗೆ ಡಿಎಯನ್ನು ಶೇಕಡ 31ಕ್ಕೆ ಏರಿಸಿತು. ಇದರ ಜತೆಗೆ, ಡಿಎ ಮಟ್ಟವನ್ನು ಆಧರಿಸಿ ನಿರ್ಧರಿಸುವ ಇತರ 4 ಭತ್ಯೆಗಳು ಸಹ ಹೆಚ್ಚಾಗಬಹುದು ಎನ್ನಲಾಗುತ್ತಿದೆ.

ಇದರಲ್ಲಿ, ಮೂಲ ವೇತನಕ್ಕೆ ಅನುಪಾತವಾಗಿ ಡಿಎ ಇರುತ್ತದೆ. ಮಾಸಿಕ ಭವಿಷ್ಯ ನಿಧಿ (ಪಿಎಫ್), ಗ್ರಾಚ್ಯುಟಿ ಮೊತ್ತ, ಎಚ್‌ಆರ್‌ಎ ಹೆಚ್ಚಳಕ್ಕೆ ಕೂಡ ಸರ್ಕಾರ ಚಿಂತನೆ ನಡೆಸಿದೆ. ಇದೇ ರೀತಿ, ತುಟ್ಟಿಭತ್ಯೆಯ ಹೆಚ್ಚಳವು ಉದ್ಯೋಗಿಗಳ ಪ್ರಯಾಣ/ಸಾರಿಗೆ ಭತ್ಯೆ ಮತ್ತು ನಗರ ಭತ್ಯೆಗಳ ಹೆಚ್ಚಳಕ್ಕೆ ಮಾರ್ಗವನ್ನು ತೆರವುಗೊಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...