ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಈ ಸಲ ಶೇಕಡ 5 ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲಿದ್ದು ಶೇಕಡ 34 ರಿಂದ ಶೇಕಡ 39ಕ್ಕೆ ಹೆಚ್ಚಳವಾಗಬಹುದು ಎನ್ನಲಾಗಿದೆ.
ಪ್ರತಿವರ್ಷ ಜನವರಿ ಮತ್ತು ಜುಲೈನಲ್ಲಿ ತುಟ್ಟಿಭತ್ಯೆ ಹೆಚ್ಚಳ ಮಾಡಲಾಗುತ್ತದೆ. ಕಳೆದ ಬಾರಿ ಶೇಕಡ 31 ರಷ್ಟಿದ್ದ ತುಟ್ಟಿಭತ್ಯೆ ಭತ್ಯೆಯನ್ನು ಶೇಕಡ 34 ಕ್ಕೆ ಏರಿಕೆ ಮಾಡಲಾಗಿತ್ತು. ಹಣದುಬ್ಬರ ಹೆಚ್ಚಳ, ಗ್ರಾಹಕರ ಸೂಚ್ಯಂಕ ಏರಿಕೆ ಹಿನ್ನೆಲೆಯಲ್ಲಿ ಈ ಬಾರಿ ತುಟ್ಟಿಭತ್ಯೆಯನ್ನು ಶೇಕಡ 5 ರಷ್ಟು ಹೆಚ್ಚಳ ಮಾಡಬಹುದೆಂದು ಹೇಳಲಾಗಿದೆ.