ಪ್ರಕರಣವೊಂದರ ವಿಚಾರಣೆ ವೇಳೆ ಬಾಂಬೆ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ವಿದ್ಯಾವಂತೆ ಎಂಬ ಕಾರಣಕ್ಕೆ ಮಹಿಳೆಯನ್ನು ಜೀವನೋಪಾಯಕ್ಕಾಗಿ ದುಡಿಯುವಂತೆ ಬಲವಂತ ಮಾಡುವಂತಿಲ್ಲ ಎಂದು ಹೇಳಿರುವ ನ್ಯಾಯಾಲಯ, ಅದು ಆಕೆಯ ಇಚ್ಚೆಗೆ ಸಂಬಂಧಪಟ್ಟಿದ್ದು ಎಂದು ತಿಳಿಸಿದೆ.

ವಿದ್ಯಾವಂತ ಮಹಿಳೆ ಕೆಲಸಕ್ಕೆ ಹೋಗುವುದು, ಬಿಡುವುದು ಆಕೆಯ ಆಯ್ಕೆಗೆ ಸೇರಿದ್ದು ಎಂದು ಹೇಳಿರುವ ನ್ಯಾಯಮೂರ್ತಿ ಭಾರತಿ ದಂಗ್ರೆ, ಮಹಿಳೆ ಅರ್ಹತೆ ಮತ್ತು ಶೈಕ್ಷಣಿಕ ಪದವಿ ಹೊಂದಿದ್ದರೂ ಸಹ ಉದ್ಯೋಗ ಮಾಡುವುದು ಅಂತಿಮವಾಗಿ ಆಕೆಯ ತೀರ್ಮಾನವಾಗಿರುತ್ತದೆ ಎಂದು ಹೇಳಿದ್ದಾರೆ.
BIG NEWS: ಜಾಹೀರಾತು ನಿಯಮ ಉಲ್ಲಂಘಿಸಿದರೆ ‘ಸೆಲೆಬ್ರಿಟಿ’ಗಳಿಗೆ ಬೀಳಲಿದೆ ದಂಡ
ವಿವಾಹ ವಿಚ್ಛೇದನ ಪ್ರಕರಣವೊಂದರಲ್ಲಿ ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡಬೇಕೆಂಬ ಕೆಳ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.