ರಿಲಯನ್ಸ್ ಜಿಯೋ ತನ್ನ 749 ರೂ. ಪ್ರಿಪೇಯ್ಡ್ ಯೋಜನೆ ನವೀಕರಿಸಿದ್ದು, ಪ್ರಿಪೇಯ್ಡ್ ಪ್ಯಾಕ್ ಅನ್ನು 150 ರೂ.ನಷ್ಟು ಪರಿಷ್ಕರಿಸಿದೆ. ಜಿಯೋಫೋನ್ ಬಳಕೆದಾರರಿಗೆ ಮಾತ್ರವಿರುವ ಈ ಯೋಜನೆ ಈಗ 899 ರೂ. ಆಗಿದೆ.
ಮಾಹಿತಿಗಾಗಿ ಜಿಯೋ ವೆಬ್ ಸೈಟ್ ಅನ್ನು ಪರಿಶೀಲಿಸಬಹುದು. ಬೆಲೆಯಲ್ಲಿ ಹೆಚ್ಚಳದ ಹೊರತಾಗಿಯೂ ಪ್ಯಾಕ್ ನ ಎಲ್ಲಾ ಇತರ ಸೌಲಭ್ಯ ಮೊದಲಿನಂತೆಯೇ ಇರುತ್ತವೆ.
899 ರೂ. JioPhone ಪ್ರಿಪೇಯ್ಡ್ ಪ್ಯಾಕ್ 336 ದಿನಗಳ ಮಾನ್ಯತೆ ನೀಡುತ್ತದೆ. ಪ್ಯಾಕ್ ಅನ್ನು 28 ದಿನಗಳ ನಂತರ ನವೀಕರಿಸಲಾಗುತ್ತದೆ. ರೀಚಾರ್ಜ್ ಯೋಜನೆಯಡಿಯಲ್ಲಿ JioPhone ಬಳಕೆದಾರರು 28 ದಿನಗಳವರೆಗೆ 2GB ಡೇಟಾವನ್ನು ಮತ್ತು 12 ತಿಂಗಳುಗಳಲ್ಲಿ ಒಟ್ಟು 24GB ಡೇಟಾವನ್ನು ಪಡೆಯುತ್ತಾರೆ. ಪ್ಯಾಕ್ 28 ದಿನಗಳಲ್ಲಿ 50 SMS ನೊಂದಿಗೆ ಬರುತ್ತದೆ. ಪ್ರಿಪೇಯ್ಡ್ ರೀಚಾರ್ಜ್ ಉಚಿತ ಧ್ವನಿ ಕರೆಯನ್ನು ನೀಡುತ್ತದೆ.
ನವೆಂಬರ್ 2021 ರಿಂದ ಟೆಲಿಕಾಂ ಆಪರೇಟರ್ ಗಳ ಪ್ರಿಪೇಯ್ಡ್ ರೀಚಾರ್ಜ್ ಪ್ಯಾಕ್ ಗಳು ದುಬಾರಿಯಾಗಿವೆ. ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ತಮ್ಮ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಹೆಚ್ಚಿಸಿವೆ. ಈಗ ಗ್ರಾಹಕರಿಗೆ ಬಿಸಿ ತಟ್ಟಲಾರಂಭಿಸಿದೆ. ಟೆಲಿಕಾಂ ಕಂಪನಿಗಳು ಮುಂಬರುವ ದಿನಗಳಲ್ಲಿ ಮತ್ತೊಮ್ಮೆ ಬೆಲೆ ಏರಿಕೆಯ ಗುರಿ ಹೊಂದಿವೆ.