ಹಾಸನ: ಶಾಸಕ ಗುಬ್ಬಿ ಶ್ರೀನಿವಾಸ್ ವಿರುದ್ಧ ವಾಗ್ದಾಳಿ ನಡೆಸಿರುವ ಜೆಡಿಎಸ್ ಮುಖಂಡ ಹೆಚ್.ಡಿ. ರೇವಣ್ಣ, ದುಡ್ಡು ಈಸ್ಕೊಂಡು ಬಿಜೆಪಿಗೆ ವೋಟ್ ಹಾಕಿದ್ದಾರೆ ಎಂಬುದು ಸಚಿವರಿಂದಲೆ ಗೊತ್ತಾಗಿದೆ ಎಂದು ಕಿಡಿ ಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ಗುಬ್ಬಿ ಶ್ರೀನಿವಾಸ್, ಎಷ್ಟು ಹಣ ಪಡೆದು ವೋಟ್ ಹಾಕಿದ್ದಾರೆ ಎಂಬುದನ್ನು ಮಂತ್ರಿಯೊಬ್ಬರು ಹೇಳಿದ್ದಾರೆ. ಅವರು ಬಿಜೆಪಿಗೆ ವೋಟ್ ಹಾಕಿದ್ದಾರೆ ಎಂದು ನನಗೆ ಗೊತ್ತಿದೆ. ವೋಟ್ ಹಾಕಿದ ಮೇಲೆ ನಾನು ಯಾರಿಗೂ ವೋಟ್ ಹಾಕಿಲ್ಲ ಅಂತಾ ತೋರಿಸಿದ್ರು. ಹೆಬ್ಬಟ್ಟು ಮುಚ್ಚಿಕೊಂಡಿದ್ದರು. ವೋಟಿಂಗ್ ವೇಳೆ ಅದನ್ನು ತೆಗೆದು ನೋಡಲು ಆಗುತ್ತಾ ? ಎಂದು ಪ್ರಶ್ನಿಸಿದರು.
ಅವರು ದೊಡ್ಡವರಿದ್ದಾರೆ. ಹಾಗಾಗಿ ಅವರ ಬಗ್ಗೆ ಮಾತನಾಡಲ್ಲ, ದೇವರೇ ಶಿಕ್ಷೆ ಕೊಡುವ ಕಾಲ ಬರುತ್ತದೆ. ಕುಮಾರಸ್ವಾಮಿ ಎಲ್ಲೊ ಕರ್ಕೊಂಡ್ ಹೋಗಿ ಬಂದು ಇವರನ್ನೆಲ್ಲ ಎಂಎಲ್ಎ ಮಾಡ್ತಾರೆ ನಂತರ ಅಂತವರೇ ಬೆನ್ನಿಗೆ ಚೂರಿ ಹಾಕಿ ಹೋಕ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.