ಕ್ರಿಕೆಟ್ ಮೈದಾನದಲ್ಲಿ ಹೆಚ್ಚು ಕೋಪದ ದೃಶ್ಯಗಳನ್ನು ಸಾಮಾನ್ಯವಾಗಿ ಕಾಣುವುದು ಬ್ಯಾಟರ್ ಗಳು ರನೌಟ್ ಆದ ಸಂದರ್ಭದಲ್ಲಿ. ಬ್ಯಾಟರ್ ಗಳಿಬ್ಬರ ನಡುವೆ ಅಂಡರ್ ಸ್ಟಾಂಡಿಂಗ್ ಇಲ್ಲದಿದ್ದರೆ ಇಂತಹ ಕೋಪದ ವಾತಾವರಣಕ್ಕೆ ಕಾರಣವಾಗುತ್ತವೆ.
ಇಂತಹ ಕೋಪವನ್ನು ತೋಡಿಕೊಂಡಿರುವುದು ಪಾಕಿಸ್ತಾನದ ಬ್ಯಾಟರ್ ಇಮಾಮ್ –ಉಲ್-ಹಕ್. ಮುಲ್ತಾನ್ ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ 2 ನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡ ಆರಂಭಿಕ ಬ್ಯಾಟರ್ ಫಖರ್ ಝಮಾನ್ ವಿಕೆಟ್ ಅನ್ನು ಬಹುಬೇಗನೇ ಕಳೆದುಕೊಂಡಿತು.
ನಂತರ ಬಂದ ಇಮಾಮ್-ಉಲ್-ಹಕ್ ಮತ್ತು ಬಾಬರ್ ಅಝಂ ಇಬ್ಬರೂ ಉತ್ತಮವಾಗಿ ಆಡುತ್ತಿದ್ದರು. ಆದರೆ, 28 ನೇ ಓವರಿನಲ್ಲಿ ಬಾಬರ್ ತಮ್ಮ ಅರ್ಧ ಶತಕವನ್ನು ಪೂರೈಸಿದರು. ಇದಾದ ಬಳಿಕ ಬಂದ ಚೆಂಡನ್ನು ಇಮಾನ್ ಮಿಡ್ ವಿಕೆಟ್ ಗೆ ಅಟ್ಟಿ ಒಂದು ರನ್ ಪಡೆಯಲು ಯತ್ನಿಸಿ ನಾನ್ ಸ್ಟ್ರೈಕರ್ ಎಂಡ್ ಗೆ ಓಡಿದರು.
ಹೊಟ್ಟೆಯಲ್ಲಿ ಜಂತು ಹುಳು ಉಪಟಳವೇ……?
ಇನ್ನೇನು ನಾನ್ ಸ್ಟ್ರೈಕರ್ ಎಂಡ್ ಗೆ ತಲುಪಬೇಕೆನ್ನುವಷ್ಟರಲ್ಲಿ ಬಾಬರ್ ಬೇಡ ವಾಪಸ್ ಹೋಗು ಎಂದು ಇಮಾಮ್ ಗೆ ಸೂಚಿಸಿದರು. ಆದರೆ, ಇಮಾಮ್ ಸ್ಟ್ರೈಕರ್ ಕಡೆಗೆ ದಾಂಗುಡಿ ಇಟ್ಟು ಓಡುವಷ್ಟರಲ್ಲಿ ಫೀಲ್ಡರ್ ಎಸೆದ ಚೆಂಡು ವಿಕೆಟ್ ಕೀಪರ್ ಕೈ ತಲುಪಿ ವಿಕೆಟ್ ಹೊಡೆದಾಯ್ತು.
ಅರ್ಧ ದಾರಿಗೆ ಬಂದ ಇಮಾಮ್ ಬಾಬರ್ ಮೇಲಿನ ಸಿಟ್ಟಿನಿಂದಲೇ ಕೈಲಿದ್ದ ಬ್ಯಾಟನ್ನು ನೆಲಕ್ಕೆ ಬೀಸಿ ತಮ್ಮ ಕೋಪವನ್ನು ತೋಡಿಕೊಂಡಿದ್ದಾರೆ.