ಹಿಂದೂ ಧರ್ಮದಲ್ಲಿ ಸ್ವಸ್ತಿಕ ಚಿತ್ರಕ್ಕೆ ಮಹತ್ವದ ಸ್ಥಾನವಿದೆ. ದೀಪಾವಳಿ ದಿನ ತಾಯಿ ಲಕ್ಷ್ಮಿ ಮನೆ ಪ್ರವೇಶ ಮಾಡ್ತಾಳೆಂಬ ನಂಬಿಕೆಯಿದೆ. ಹಾಗಾಗಿ ದೇವರ ಮನೆ ಹಾಗೂ ಪೂಜೆ ಮಾಡುವ ಸ್ಥಳದಲ್ಲಿ ಸ್ವಸ್ತಿಕ ಚಿತ್ರವನ್ನು ಬಿಡಿಸುತ್ತಾರೆ.
ಸ್ವಸ್ತಿಕ ಚಿಹ್ನೆ ಬಿಡಿಸುವುದು ಮಂಗಳಕರ. ಸ್ವಸ್ತಿಕ ಕೆಟ್ಟ ಶಕ್ತಿ ಹಾಗೂ ನಕಾರಾತ್ಮಕ ಶಕ್ತಿಯನ್ನು ಹೊಡೆದೋಡಿಸುತ್ತದೆ. ಆದ್ರೆ ಸ್ವಸ್ತಿಕ ಬಿಡಿಸುವ ವೇಳೆ ಗಮನ ನೀಡಬೇಕಾಗುತ್ತದೆ. ತಪ್ಪಿ ಸ್ವಸ್ತಿಕ ಚಿಹ್ನೆ ಬಿಡಿಸಿದ್ರೆ ತಾಯಿ ಮುನಿಸಿಕೊಳ್ತಾಳೆ.
ಮನೆಯಲ್ಲಿ ಸ್ವಸ್ತಿಕವನ್ನು ಎಂದೂ ರಂಗೋಲಿ, ಚಂದನ ಮತ್ತು ಅರಿಶಿನದಿಂದ ಮಾತ್ರ ಮಾಡಬೇಕು.
ಸ್ವಸ್ತಿಕ ಬಿಡಿಸುವಾಗ ಅದ್ರ ದಿಕ್ಕಿನ ಬಗ್ಗೆಯೂ ಗಮನವಿರಲಿ. ಎಡ ಮತ್ತು ಬಲದ ಬಗ್ಗೆ ಗಮನವಿಟ್ಟು ಸ್ವಸ್ತಿಕ ಚಿಹ್ನೆ ಬಿಡಿಸಿ.
ಕಳಶದ ಮೇಲಿಟ್ಟ ಅಕ್ಕಿಯಲ್ಲಿ ಸ್ವಸ್ತಿಕ ಬಿಡಿಸಲು ಮುಂದಾದ್ರೆ ಸ್ವಸ್ತಿಕ ಚಿತ್ರ ಸ್ಪಷ್ಟವಾಗಿರಲಿ.
ಸ್ವಸ್ತಿಕ ಬಿಡಿಸಿದ ವೇಳೆ ಧೂಪ ಹಾಗೂ ಗಂಗಾಜಲವನ್ನು ಹಾಕಿ ಶುದ್ಧ ಮಾಡಿ.
ಸ್ವಸ್ತಿಕ ಮಂಗಳದ ಸಂಕೇತ. ಸ್ವಸ್ತಿಕ ಚಿತ್ರವನ್ನು ತಪ್ಪಾಗಿ ಬಿಡಿಸಿದ್ರೆ ಇದು ಎಲ್ಲ ಕೆಲಸವನ್ನು ಹಾಳು ಮಾಡುತ್ತದೆ.