ಆಮೆ, ಮೊಲದ ಕಥೆ ಯಾರಿಗೆ ಗೊತ್ತಿಲ್ಲ ಹೇಳಿ, ಮೊಲ ಅವಸರಕ್ಕೆ ಬಿದ್ದು ಓಡಿ, ಕೊನೆಗೆ ಓಟದ ಮಧ್ಯೆಯೇ ನಿದ್ದೆ ಮಾಡಿತ್ತು. ಆದರೆ ಆಮೆ ಹಾಗಲ್ಲ ನಿಧಾನವಾಗಿಯಾದರೂ ತಾಳ್ಮೆಯಿಂದ ಓಡಿ ಕೊನೆಗೂ ಸ್ಪರ್ಧೆಯನ್ನ ಗೆದ್ದು ತೋರಿಸಿತ್ತು. ಇಲ್ಲೂ ಕೂಡಾ ಆಮೆಗಳ ತಾಳ್ಮೆ ಹೇಗಿರುತ್ತೆ ಅಂತ ಮತ್ತೊಮ್ಮೆ ಸಾಬೀತು ಮಾಡಿರೋ ವಿಡಿಯೋ.
ಹೌದು…… ಅದೊಂದು ಪುಟ್ಟ ಕೆರೆ. ಅದೇ ಕೆರೆಯಲ್ಲಿ ಮರದ ದಿಮ್ಮಿ ತೇಲುತ್ತಿತ್ತು. ಅದೇ ಮರದ ದಿಮ್ಮಿ ಮೇಲೆ ಒಂದೊಂದಾಗಿ ಆಮೆ ಮರಿಗಳು ಹತ್ತುತ್ತವೆ. ಹತ್ತಿ ಅಲ್ಲೇ ಎಲ್ಲವೂ ಸಾಲಿನಲ್ಲಿ ನಿಂತುಕೊಳ್ಳುತ್ತೆ.
ಆ ನಂತರ ಆ ಮರಿಗಳ ತಾಯಿ ಕೂಡಾ ಆ ಮರದ ದಿಮ್ಮಿ ಹತ್ತುತ್ತೆ. ಆಗಲೇ ಮರದ ದಿಮ್ಮಿ ಅಲ್ಲಾಡಲು ಶುರುವಾಗುತ್ತೆ. ಆಗ ಕೆಲ ಆಮೆ ಮರಿಗಳು ಆ ಮರದ ದಿಮ್ಮಿಯನ್ನ ಗಟ್ಟಿಯಾಗಿ ಹಿಡಿದು ಹಾಗೆಯೇ ನಿಂತಿರುತ್ತೆ. ಆ ದೃಶ್ಯ ನಿಜಕ್ಕೂ ಅದ್ಭುತ.
ಆದರೆ ಕೆಲ ತಾಯಿ ಆಮೆ ಮಾತ್ರ ಬ್ಯಾಲೆನ್ಸ್ ಮಾಡಲಾಗದೇ ನೀರಿನಲ್ಲಿ ಬಿದ್ದು ಬಿಡುತ್ತೆ. ಅದರ ಜೊತೆ ಜೊತೆ ಕೆಲ ಆಮೆ ಮರಿಗಳು ಕೂಡಾ ನೀರಿನಲ್ಲಿ ಬೀಳುತ್ತೆ.
ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಆಗಿರೋ ಈ ವಿಡಿಯೋ ವೈರಲ್ ಆಗಿದೆ. ಆಮೆ ಮರಿಗಳ ಟ್ಯಾಲೆಂಟ್ ನೋಡಿ ಜನರು ಎಂಜಾಯ್ ಮಾಡುತ್ತಿದ್ದಾರೆ. ಈ ವಿಡಿಯೋವನ್ನ ಈಗಾಗಲೇ 8 ಮಿಲಿಯನ್ ಜನರು ವೀಕ್ಷಿಸಿದ್ದು, ಕೆಲವರು ಆಮೆ ಮರಿಗಳ ಟ್ಯಾಲೆಂಟ್ ಹೊಗಳಿದ್ರೆ, ಇನ್ನು ಕೆಲವರು ತಮಾಷೆ ಮಾಡುತ್ತಿದ್ದಾರೆ.
https://twitter.com/buitengebieden/status/1533380860841496577?ref_src=twsrc%5Etfw%7Ctwcamp%5Etweetembed%7Ctwterm%5E1533380860841496577%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fviral-video-of-seven-turtles-balancing-themselves-on-a-log-has-8-million-views-watch-1959491-2022-06-07
https://twitter.com/buitengebieden/status/1533716138089234432