ಮೈಸೂರು: ಬೆಂಗಳೂರಿನಲ್ಲಿ ಸ್ವತಂತ್ರವಾಗಿ ಗೆದ್ದಿದ್ದೇನೆ. ಇದನ್ನು ಅರ್ಥ ಮಾಡಿಕೊಳ್ಳಿ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ಮೈಸೂರಿನಲ್ಲಿ ಆಕ್ರೋಶದ ಭಾಷಣ ಮಾಡಿದ ಅವರು, ನನ್ನ ದುಡಿಮೆ ಬಹಳ ದೊಡ್ಡದಿದೆ. ಇದನ್ನು ಅರ್ಥ ಮಾಡಿಕೊಳ್ಳಿ. ಯಡಿಯೂರಪ್ಪ ಅವರನ್ನು ಯಾರೆಲ್ಲ ಹೇಗೆ ನಡೆಸಿಕೊಂಡಿದ್ದಾರೆ ಎಂದು ಗೊತ್ತಿದೆ. ವಿಜಯೇಂದ್ರ ವಿಧಾನಪರಿಷತ್ ಸದಸ್ಯರಾಗಬೇಕೆಂದು ಮೊದಲು ಹೇಳಿದ್ದೇ ನಾನು. ಬೇರೆಯವರ ಬಗ್ಗೆ ಮಾತನಾಡುವಾಗ ಯೋಚನೆ ಮಾಡಿ ಮಾತನಾಡಿ ಎಂದು ಹೇಳಿದ್ದಾರೆ.
ಯಡಿಯೂರಪ್ಪನವರ ಮಗ ವಿಜಯೇಂದ್ರರಿಗೆ 41 ವರ್ಷ, ನನಗೆ 71 ವರ್ಷ. ವಿಜಯೇಂದ್ರ ಅವರಿಗೂ ನನಗೂ ಯಾಕೆ ಪೈಪೋಟಿ ತರುತ್ತೀರಾ? ಈ ಸಮಾಜಕ್ಕೆ ನನ್ನದೇ ಆದ ಕೊಡುಗೆ ಇದೆ. ಸೋಮಣ್ಣನ ಶಕ್ತಿಯಿದೆ. ವಿಜಯೇಂದ್ರ ವರುಣಾ ಕ್ಷೇತ್ರ ಅಥವಾ ಹನೂರು ಕ್ಷೇತ್ರದಲ್ಲಿ ಸ್ಪರ್ಧಿಸಲಿ. ಹೈಕಮಾಂಡ್ ಹೇಳಿದಂತೆ ಬಿ.ವೈ. ವಿಜಯೇಂದ್ರ ಸ್ಪರ್ಧೆ ಇರುತ್ತದೆ. ನನ್ನ ಕ್ಷೇತ್ರದ ಜನ ನನ್ನನ್ನು ತಲೆಮೇಲೆ ಹೊತ್ತುಕೊಂಡು ಮೆರೆಯುತ್ತಿದ್ದಾರೆ. ಮೊದಲು ನೀವು ಸರಿಯಾಗಿ. ನನಗೆ ನನ್ನದೇ ಆದಂತಹ ಕ್ಷೇತ್ರವಿದೆ ಎಂದು ಆಕ್ರೋಶದ ಭಾಷಣ ಮಾಡಿದ್ದಾರೆ.