ಬೆಂಗಳೂರು: ಬಿಬಿಎಂಪಿ ವಾರ್ಡ್ ಮರು ವಿಂಗಡಣೆ ಕುರಿತ ಕರಡು ವರದಿ ಲೋಪ ಸರಿಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ವಾರ್ಡ್ ಮರು ವಿಂಗಡಣೆ ಸಮಿತಿ ರಾಜ್ಯ ಸರ್ಕಾರಕ್ಕೆ ಸೋಮವಾರ ವರದಿ ಸಲ್ಲಿಸಿದೆ. ಜನಸಂಖ್ಯೆ, ವಿಸ್ತೀರ್ಣ ಲೋಪ ಸರಿಪಡಿಸಲಾಗಿದ್ದು, ಮುಖ್ಯಮಂತ್ರಿಗಳು ಅಂಕಿತ ಹಾಕಿದ ನಂತರ ಆಕ್ಷೇಪಣೆ ಆಹ್ವಾನಿಸಲಾಗುವುದು ಎನ್ನಲಾಗಿದೆ.
ಬಿಬಿಎಂಪಿಯಲ್ಲಿ 198 ವಾರ್ಡ್ ಗಳಿದ್ದು, ಅವುಗಳನ್ನು 243 ವಾರ್ಡ್ ಗಳಿಗೆ ಹೆಚ್ಚಳ ಮಾಡಲಾಗಿದೆ. ಪ್ರತಿ ವಾರ್ಡ್ ಗೆ ಸರಾಸರಿ 35,000 ಜನಸಂಖ್ಯೆ ಹಂಚಿಕೆ ಮಾಡಬೇಕಿತ್ತು. ಕೆಲವೊಂದು ವಾರ್ಡಗಳಲ್ಲಿ 40 ಸಾವಿರಕ್ಕಿಂತ ಹೆಚ್ಚಾಗಿತ್ತು. ನಗರಾಭಿವೃದ್ಧಿ ಇಲಾಖೆಯಿಂದ ಜನಸಂಖ್ಯೆ ಮತ್ತು ವಾರ್ಡ್ ವಿಸ್ತೀರ್ಣ ಸಮಾನವಾಗಿರುವಂತೆ ಪರಿಷ್ಕರಿಸಲು ವಾರ್ಡ್ ಮರುವಿಂಗಡಣೆ ಸಮಿತಿಗೆ ತಿಳಿಸಿದ್ದು ಪರಿಷ್ಕೃತ ಕರಡಿನಲ್ಲಿ ವ್ಯತ್ಯಾಸಗಳನ್ನು ಸರಿಪಡಿಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ ಎಂದು ಹೇಳಲಾಗಿದೆ.