ಆಧಾರ್ನ ಭದ್ರತೆಗೆ ಸಂಬಂಧಿಸಿದ ಸುದ್ದಿ ಪದೇಪದೆ ಬರುತ್ತಿರುತ್ತದೆ. ಆಧಾರ್ ವಂಚನೆಯೂ ಕಡಿಮೆ ಏನಲ್ಲ. ಹೀಗಾಗಿ ಕಾಲಕಾಲಕ್ಕೆ ಆಧಾರ್ ವಂಚನೆ ತಡೆಯಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಯುಐಡಿಎಐ (UIDAI) ಸಲಹೆ ಸೂಚನೆಗಳನ್ನು ನೀಡುತ್ತಿರುತ್ತದೆ. ಈ ಸಲ ಆಧಾರ್ ವಂಚನೆ ತಡೆಗೆ ಏಳು ಸೂತ್ರಗಳನ್ನು ಸರಣಿ ಟ್ವೀಟ್ ಮೂಲಕ ಪ್ರಸ್ತುತಪಡಿಸಿದೆ. ಅವು ಹೀಗಿವೆ.
1. ನಿಮಗೆ ಸಿಕ್ಕಿರುವ ಆಧಾರ್ ಅನ್ನು ಪರಿಶೀಲಿಸಿ: ಎಲ್ಲ 12- ಅಂಕಿಯ ಸಂಖ್ಯೆ ಆಧಾರ್ ಸಂಖ್ಯೆ ಅಲ್ಲ. ಗುರುತಿನ ಪುರಾವೆಯಾಗಿ ಸ್ವೀಕರಿಸುವ ಮೊದಲು ಅದನ್ನು ಆಧಾರ್ ಪೋರ್ಟಲ್ನಲ್ಲಿ ಪರಿಶೀಲಿಸಬೇಕು.
2. ಆಧಾರ್ ಒಟಿಪಿ ಶೇರ್ ಮಾಡಬೇಡಿ: ಯಾವುದೇ ಕಾರಣಕ್ಕೂ ಆಧಾರ್ ಒಟಿಪಿಯನ್ನು ಶೇರ್ ಮಾಡಬೇಡಿ.
3. ಸಾರ್ವಜನಿಕ ಕಂಪ್ಯೂಟರ್ಗಳಲ್ಲಿ ಆಧಾರ್ ಡೌನ್ಲೋಡ್ ಮಾಡಬೇಡಿ: ಸಾರ್ವಜನಿಕ ಕಂಪ್ಯೂಟರ್ಗಳಲ್ಲಿ ಇ- ಆಧಾರ್ ಅನ್ನು ಡೌನ್ಲೋಡ್ ಮಾಡಬೇಡಿ. ಅಕಸ್ಮಾತ್ ಮಾಡಿದರೂ, ಅದನ್ನು ಸಂಪೂರ್ಣವಾಗಿ ಡಿಲೀಟ್ ಮಾಡಿ.
4. ಆಧಾರ್ ಡೌನ್ಲೋಡ್ಗೆ ಅಧಿಕೃತ ಪೋರ್ಟಲ್ ಮಾತ್ರವೇ ಬಳಸಿ: 12-ಅಂಕಿಯ ಆಧಾರ್ ಸಂಖ್ಯೆಯನ್ನು ನೀಡುವ UIDAI ಯ ಅಧಿಕೃತ ವೆಬ್ಸೈಟ್ನಿಂದ ಮಾತ್ರವೇ ಆಧಾರ್ ಡೌನ್ಲೋಡ್ ಮಾಡಿ.
5. ಆಧಾರ್ ದೃಢೀಕರಣ ಇತಿಹಾಸ ಪರಿಶೀಲಿಸಿ: “ಕಳೆದ 6 ತಿಂಗಳುಗಳ 50 ಆಧಾರ್ ದೃಢೀಕರಣ ಇತಿಹಾಸವನ್ನು ಪರಿಶೀಲಿಸಬಹುದು. ದೃಢೀಕರಣದ ನಿಖರ ದಿನಾಂಕ, ಸಮಯವನ್ನು ಇದರಲ್ಲಿ ಗಮನಿಸಬಹುದು.
6. ಆಧಾರ್ ಲಾಕ್ ಮಾಡಿ: ಆಧಾರ್ ಬಯೋಮೆಟ್ರಿಕ್ಸ್ನ ಯಾವುದೇ ಸಂಭವನೀಯ ದುರುಪಯೋಗವನ್ನು ತಪ್ಪಿಸಲು ಅಧಿಕೃತ ವೆಬ್ಸೈಟ್ ಬಳಸಬೇಕು ಮತ್ತು ದುರುಪಯೋಗ ತಡೆಯುವುದಕ್ಕೆ mAahdaar ಅಪ್ಲಿಕೇಶನ್ ಬಳಸಿ ಲಾಕ್ ಮಾಡಬೇಕು.
7. ಮಾಸ್ಕ್ ಮಾಡಿರುವ ಆಧಾರ್ ಬಳಸಿ: ಮಾಸ್ಕ್ ಮಾಡಿದ ಆಧಾರ್ ಬಳಕೆ ಸದಾ ಉತ್ತಮ. ಇದಕ್ಕೂ ಮಾನ್ಯತೆ ಇದೆ ಮತ್ತು ವ್ಯಾಪಕವಾಗಿ ಬಳಕೆಯಲ್ಲಿದೆ. ಮಾಸ್ಕ್ ಮಾಡಿದ ಆಧಾರ್ ಎಂದರೆ ಆಧಾರ್ ಸಂಖ್ಯೆಯ ಕೊನೆಯ ನಾಲ್ಕು ಅಂಕೆಗಳನ್ನಷ್ಟೇ ಇದು ತೋರಿಸುತ್ತದೆ.