ಲಖ್ನೌ: 2006ರಲ್ಲಿ ವಾರಾಣಸಿಯಲ್ಲಿ ಸಂಭವಿಸಿದ್ದ ಅವಳಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ವಾಲಿವುಲ್ಲಾ ಖಾನ್ ಗೆ ಗಾಜಿಯಾಬಾದ್ ಕೋರ್ಟ್ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
2006 ಮಾರ್ಚ್ 7ರಂದು ವಾರಾಣಸಿಯ ದೇವಸ್ಥಾನ ಹಾಗೂ ರೈಲ್ವೆ ನಿಲ್ದಾಣದಲ್ಲಿ ಉಗ್ರ ವಾಲಿವುಲ್ಲಾ ಬಾಂಬ್ ಸ್ಫೋಟ ನಡೆಸಿದ್ದ. ಘಟನೆಯಲ್ಲಿ 20 ಜನರು ಸಾವನ್ನಪ್ಪಿದ್ದರಲ್ಲದೇ, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಇದೀಗ 16 ವರ್ಷಗಳ ಬಳಿಕ ಪ್ರಕರಣದ ಅಪರಾಧಿ ವಾಲಿವುಲ್ಲಾಗೆ ಉತ್ತರ ಪ್ರದೇಶ ಗಾಝಿಯಾಬಾದ್ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.