ಐಐಎಫ್ಎ ರಾಕ್ಸ್ ಕಾರ್ಯಕ್ರಮ ಹಲವು ವಿಶೇಷತೆಗೆ ಸಾಕ್ಷಿಯಾಯಿತು. ಜೂನ್ 3 ರಂದು ರಾತ್ರಿನಡೆದ ಕಾರ್ಯಕ್ರಮದಲ್ಲಿ ಗಾಯಕ, ರಾಪರ್ ಹನಿ ಸಿಂಗ್ ಅವರು ತಮ್ಮ ಜಬರ್ದಸ್ತ್ ಪ್ರದರ್ಶನದೊಂದಿಗೆ ಸಂಚಲನ ಮೂಡಿಸಿದರು.
ಸಾರಾ ಅಲಿ ಖಾನ್, ಗ್ರೀನ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವಾಗ ಹನಿ ಆಕ್ಟ್ ಬಗ್ಗೆ ನಿಜವಾಗಿಯೂ ಉತ್ಸುಕಳಾಗಿದ್ದೇನೆ ಎಂದು ಹೇಳಿದರು.
ಇನ್ನೊಂದು ಮುಖ್ಯ ಸಂಗತಿ ಎಂದರೆ ಹನಿ ಸಿಂಗ್ ಎ.ಆರ್. ರೆಹಮಾನ್ ಮುಂದೆ ತಲೆ ಬಾಗಿಸಿ ಕಾಲಿಗೆರಗಿ ನಮಸ್ಕರಿಸಿದರು, ಬಳಿಕ ಹಿಟ್ ಹಾಡುಗಳನ್ನು ಪ್ರಸ್ತುತಪಡಿಸಿದರು. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.
ವೇದಿಕೆ ಮುಂಭಾಗದಲ್ಲಿ ಕುಳಿತಿದ್ದ ಎ.ಆರ್. ರೆಹಮಾನ್ ಅವರ ಕಡೆಗೆ ಹೋಗಿ, ಅವರ ಪಾದಗಳನ್ನು ಮುಟ್ಟಿ ಹನಿ ಸಿಂಗ್ ವಾಪಸಾಗುವಾಗ ಎ.ಆರ್. ರೆಹಮಾನ್ ಕೈ ಕುಲುಕಿದರು.
ಲುಂಗಿ ಡ್ಯಾನ್ಸ್ ಖ್ಯಾತಿಯ ಈ ಗಾಯಕ ತನ್ನ ಇನ್ ಸ್ಟಾ ಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಮರುಹಂಚಿಕೊಂಡಿದ್ದಾರೆ. ಇದು “ನನ್ನ ಜೀವನದ ಮಹತ್ವದ ಕ್ಷಣ @arrahman ಸರ್ ” ಎಂದು ಬರೆದುಕೊಂಡಿದ್ದಾರೆ.