alex Certify BIG NEWS: PSI ನೇಮಕಾತಿ ಅಕ್ರಮ; ದರ್ಶನ್ ಗೌಡನನ್ನು ಬಂಧಿಸಿದ CID | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: PSI ನೇಮಕಾತಿ ಅಕ್ರಮ; ದರ್ಶನ್ ಗೌಡನನ್ನು ಬಂಧಿಸಿದ CID

ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದರ್ಶನ್ ಗೌಡನನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ದರ್ಶನ್ ಗೌಡ ರಾಮನಗರ ಜಿಲ್ಲೆಯ ಮಾಗಡಿ ಮೂಲದ ನಿವಾಸಿ. ದರ್ಶನ್ ಗೌಡ ಪ್ರಕರಣದಲ್ಲಿ ಸಚಿವ ಅಶ್ವತ್ಥನಾರಾಯಣ ಹೆಸರು ಬಾಯ್ಬಿಟ್ಟಿದ್ದ ಎಂದು ಹೇಳಲಾಗಿತ್ತು. ನಿನ್ನೆ ವಿಚಾರಣೆಗಾಗಿ ಸಿಐಡಿ ಪೊಲೀಸರು ದರ್ಶನ್ ಗೌಡನನ್ನು ವಶಕ್ಕೆ ಪಡೆದಿದ್ದರು. ಇದೀಗ ಆತನನ್ನು ಬಂಧಿಸಿದ್ದಾರೆ.

BIG NEWS: ಪಿಎಸ್‌ಐ ನೇಮಕಾತಿ ಅಕ್ರಮ; ಕಾನ್ಸ್ ಟೇಬಲ್ ಸೇರಿ ಮತ್ತೆ ಮೂವರ ವಿರುದ್ಧ FIR ದಾಖಲು

ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ದರ್ಶನ್ ಗೌಡ ಓಎಂಆರ್ ಶೀಟ್ ಖಾಲಿ ಬಿಟ್ಟಿದ್ದ. ಪರೀಕ್ಷೆ ಬಳಿಕ ಅದನ್ನು ತುಂಬಲಾಗಿರುವುದು ಎಫ್ ಎಸ್ ಎಲ್ ವರದಿಯಲ್ಲಿ ದೃಢಪಟ್ಟಿದೆ. ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ ದರ್ಶನ್ ಗೌಡ ವಿರುದ್ಧ ಸಾಕ್ಷಿ ಸಮೇತ ದೂರು ಕೂಡ ದಾಖಲಾಗಿತ್ತು. ಇದೀಗ ಸಿಐಡಿ ಪೊಲೀಸರು ದರ್ಶನ್ ಗೌಡನನ್ನು ಬಂಧಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...