ಬೆಂಗಳೂರು: ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಎಫ್ಐಆರ್ ದಾಖಲಾಗಿದೆ. ಕಲಾಸಿ ಪಾಳ್ಯ ಠಾಣೆ ಕಾನ್ಸ್ ಟೇಬಲ್ ಸೇರಿದಂತೆ ಮೂವರ ವಿರುದ್ಧ ರಾಮಮೂರ್ತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಾಸಿಪಾಳ್ಯ ಠಾಣೆ ಕಾನ್ಸ್ ಟೇಬಲ್ ಹರೀಶ್, ಎಫ್ ಡಿ ಎ ಹರ್ಷ ಹಾಗೂ ಖಾಸಗಿ ವ್ಯಕ್ತಿ ಮನೋಜ್ ಸೇರಿ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪಿಎಸ್ಐ ಪರೀಕ್ಷೆ ಪಾಸ್ ಮಾಡಲು ಕಾನ್ಸ್ ಟೇಬಲ್ ಹರೀಶ್ ಡೀಲ್ ಮಾಡಿಕೊಂಡಿದ್ದ. ಒಂಎಂಆರ್ ಶೀಟ್ ನಲ್ಲಿ ಉತ್ತರ ತುಂಬಲು 50 ಲಕ್ಷ ರೂಪಾಯಿ ಹಣ ನೀಡಿದ್ದ ಎನ್ನಲಾಗಿದೆ.
ಅಕ್ರಮ ಬಯಲಾಗಿರುವ ಹಿನ್ನೆಲೆಯಲ್ಲಿ ಇದೀಗ ಎಫ್ಐಆರ್ ದಾಖಲಾಗಿದ್ದು, ವಿಚಾರಣೆಗಾಗಿ ಮೂವರನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆಯಲಿದ್ದಾರೆ.