ನವದೆಹಲಿ: ಲಸಿಕೆ ಮಿಶ್ರಣಕ್ಕೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ ಒಪ್ಪಿಗೆ ನೀಡಿದೆ. ಬೂಸ್ಟರ್ ಡೋಸ್ ಪಡೆಯುವ ಸಂದರ್ಭದಲ್ಲಿ ಕೋರ್ಬೆವ್ಯಾಕ್ಸ್ ಲಸಿಕೆ ಪಡೆದುಕೊಳ್ಳಲು ಅನುಮೋದನೆ ನೀಡಲಾಗಿದೆ.
5 ರಿಂದ 18 ವರ್ಷದ ಮಕ್ಕಳಿಗೆ ಕೋರ್ಬೆವ್ಯಾಕ್ಸ್ ಲಸಿಕೆ ನೀಡಲಾಗುತ್ತಿದ್ದು, ಇದನ್ನು ಯಾವುದೇ ಲಸಿಕೆ ಪಡೆದ ವಯಸ್ಕರು ಬೂಸ್ಟರ್ ಡೋಸ್ ಆಗಿ ಪಡೆಯಬಹುದಾಗಿದೆ.
ಮೊದಲ ಮತ್ತು ಎರಡನೇ ಡೋಸ್ ಗಳಲ್ಲಿ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆ ಪಡೆದಿರುವವರು ಕೂಡ ಮೂರನೇ ಡೋಸ್ ನಲ್ಲಿ ಕೋರ್ಬೆವ್ಯಾಕ್ಸ್ ಪಡೆಯಬಹುದು. ಈ ಮೂಲಕ ದೇಶದಲ್ಲಿ ಇದೇ ಮೊದಲ ಬಾರಿಗೆ ಕೋರೋನಾ ಲಸಿಕೆ ಮಿಶ್ರಣಕ್ಕೆ ಅನುಮತಿ ನೀಡಲಾಗಿದೆ. ಇದುವರೆಗೆ ಮೊದಲೆರಡು ಡೋಸ್ ಗಳಲ್ಲಿ ಪಡೆದ ಲಸಿಕೆಯನ್ನು ಬೂಸ್ಟರ್ ಡೋಸ್ ನಲ್ಲಿ ಪಡೆಯಲು ಅನುಮತಿ ನೀಡಲಾಗಿತ್ತು. ಈಗ ಕೋರ್ಬೆವ್ಯಾಕ್ಸ್ ಪಡೆಯಲು ಅನುಮತಿ ನೀಡಲಾಗಿದೆ.
ಕೋವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆಯ ಎರಡನೇ ಡೋಸ್ ಪಡೆದ 6 ತಿಂಗಳ ನಂತರ ಕೋರ್ಬೆವ್ಯಾಕ್ಸ್ ಬೂಸ್ಟರ್ ಲಸಿಕೆ ಪಡೆಯಬಹುದು.