ನವದೆಹಲಿ: ಸಚಿವ ಸಂಪುಟ ಪುನಾರಚನೆಗೆ ಮುನ್ನ ಒಡಿಶಾದ ನವೀನ್ ಪಟ್ನಾಯಕ್ ಸರ್ಕಾರದ ಎಲ್ಲ ಸಚಿವರು ಶನಿವಾರ ರಾಜೀನಾಮೆ ಸಲ್ಲಿಸಿದ್ದಾರೆ.
ಹೊಸ ಸಂಪುಟ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಭಾನುವಾರ ನಡೆಯಲಿದೆ. ಬ್ರಜರಾಜನಗರ ವಿಧಾನಸಭಾ ಉಪಚುನಾವಣೆಯಲ್ಲಿ ನವೀನ್ ಪಟ್ನಾಯಕ್ ನೇತೃತ್ವದ ಬಿಜು ಜನತಾ ದಳ(ಬಿಜೆಡಿ) ಭರ್ಜರಿ ಜಯಗಳಿಸಿದೆ. ಪಕ್ಷದ ಅಭ್ಯರ್ಥಿ ಅಲಕಾ ಮೊಹಂತಿ 66,122 ಮತಗಳ ಅಂತರದಿಂದ ಗೆದ್ದು, 2019 ರ ನಂತರ ಮೊದಲ ಬಾರಿಗೆ ಪ್ರತಿಪಕ್ಷ ಬಿಜೆಪಿಯನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದಾರೆ. ಈ ಕ್ಷೇತ್ರದಲ್ಲಿನ ಭಾರೀ ಗೆಲುವು ಒಡಿಶಾದಲ್ಲಿ ಆಡಳಿತಾರೂಢ ಪಕ್ಷಕ್ಕೆ ಸಚಿವ ಸಂಪುಟ ಪುನಾರಚನೆಯ ನಿರ್ಧಾರ ಕೈಗೊಳ್ಳುವಂತೆ ಮಾಡಿದೆ ಎಂದು ವರದಿಯಾಗಿದೆ.