ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ತಾರಕಕ್ಕೇರಿದ್ದು, ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಸಿಎಂಗಿಂತ ದೊಡ್ಡವರೇ ಎಂದು ಪ್ರಶ್ನಿಸಿದ್ದಾರೆ.
ಕುವೆಂಪು, ನಾಡಗೀತೆ, ಬಸವಣ್ಣ, ಬುದ್ಧ, ಅಂಬೇಡ್ಕರ್, ನಾರಾಯಣ ಗುರು ಹೀಗೆ ಎಲ್ಲರಿಗೂ ಅವಮಾನ ಮಾಡಿದ್ದಾರೆ ಆದರೂ ಸಿಎಂ ಬೊಮ್ಮಾಯಿ ರೋಹಿತ್ ಚಕ್ರತೀರ್ಥ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಎಲ್ಲದಕ್ಕೂ ಸುಮ್ಮನಾಗಿದ್ದಾರೆ. ರೋಹಿತ್ ಚಕ್ರತೀರ್ಥ ಪ್ರಶ್ನಾತೀತ ವ್ಯಕ್ತಿ ಎಂದು ಅರ್ಥವೇ? ಅಥವಾ ವಿದ್ಯಾರ್ಥಿಗಳಿಗಿಂತ ರೋಹಿತ್ ಚಕ್ರತೀರ್ಥನೇ ಮುಖ್ಯವೇ? ಎಂದು ಕಿಡಿಕಾರಿದ್ದಾರೆ.
BJP ಮುಖಂಡನ ಹತ್ಯೆಗೆ ಯತ್ನ; PWD ಇಲಾಖೆಯ ಇಬ್ಬರು ಎಂಜಿನಿಯರ್ ಗಳು ಅಮಾನತು
ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಸಾಕಷ್ಟು ಗೊಂದಲಗಳಿವೆ. ತಪ್ಪು ಮಾಹಿತಿಗಳನ್ನು ನೀಡಲಾಗಿದೆ. ಹೀಗಿದ್ದರೂ ಗೊಂದಲ ಇದ್ದರೆ ಸರಿಪಡಿಸುತ್ತೇವೆ ಎಂದು ಹೇಳುತ್ತಾ ಪರಿಷ್ಕರಣ ಸಮಿತಿಯನ್ನೇ ವಿಸರ್ಜನೆ ಮಾಡಿದ್ದಾರೆ. ಈಗಾಗಲೇ ಮುದ್ರಣಗೊಂಡಿರುವ ಪುಸ್ತಕಗಳು ಬಿಇಒ ಕಚೇರಿಗೂ ತಲುಪಿವೆ. ಸಮಿತಿಯೇ ಇಲ್ಲ ಎಂದಮೇಲೆ ಪರಿಶೀಲನೆ ಹೇಗೆ ಮಾಡ್ತಾರೆ? ಎಂದು ಪ್ರಶ್ನಿಸಿದರು.
ಈಗಾಗಲೇ ಕೋವಿಡ್ ನಿಂದಾಗಿ ಮಕ್ಕಳ ಕಲಿಕೆ ನಿಂತುಹೋಗಿದೆ. ಎಸ್ ಡಿ ಎಂ ಸಿ ಗಳಿಗೆ ಕೊಡಬೇಕಾದಷ್ಟು ಅನುದಾನವನ್ನು ಈವರೆಗೆ ಕೊಟ್ಟಿಲ್ಲ. ಸ್ಕಾಲರ್ ಶಿಪ್, ಸೈಕಲ್ ಗಳ ವಿತರಣೆಯಾಗಿಲ್ಲ. ಹೋಗಲಿ ಮಕ್ಕಳ ಕಲಿಕೆಗೆ ಏನಾದರೂ ಕಾರ್ಯಕ್ರಮವನ್ನು ತಂದಿದ್ದಾರಾ? ಬಡವರ ಮಕ್ಕಳು ಇಂದು ಸಂಕಷ್ಟಕ್ಕೀಡಾಗುತ್ತಿದ್ದಾರೆ. ಬಿಜೆಪಿ ನಾಯಕರ ಮಕ್ಕಳು ಆರ್ ಎಸ್ ಎಸ್ ಶಾಖೆಗಳಿಗೆ ಹೋಗುತ್ತಿದ್ದಾರಾ? ಇಲ್ಲ, ಬಡವರ ಮಕ್ಕಳು ಶಾಖೆಗೆ ಹೋಗುತ್ತಾರೆ. ಇವರ ಮಕ್ಕಳು ಉತ್ತಮ ಶಿಕ್ಷಣ ಸಂಸ್ಥೆಗಳಿಗೆ ಹೋಗುತ್ತಾರೆ. ಇಂದು ಬಡವರ ಮಕ್ಕಳು ಗೋಶಾಲೆಗೆ ಹೋಗಿ ಗೋರಕ್ಷಕರಾಗಬೇಕು ಇಂತಹ ಪದ್ಧತಿಗಳನ್ನು ಮೊದಲು ಸರ್ಕಾರ ನಿಲ್ಲಿಸಲಿ ಎಂದು ಆಗ್ರಹಿಸಿದರು.