ಪಾಕಿಸ್ತಾನಿ ಗಾಯಕ ಅಲಿ ಜಾಫರ್ ಹನ್ನೊಂದು ವರ್ಷಗಳ ಹಿಂದೆ ಹಾಡಿದ್ದ ಝೂಮ್ ಹಾಡು ಮತ್ತೆ ಸದ್ದು ಮಾಡುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿರುವ ಈ ಹಾಡು ವೈರಲ್ ಆಗಿದೆ. ನೆಟ್ಟಿಗರು, ಇನ್ಫ್ಲುಯೆನ್ಸರ್ಸ್, ಬಾಲಿವುಡ್ ಸೆಲೆಬ್ರಿಟಿಗಳಿಂದ ಮೆಚ್ಚುಗೆಗೂ ಪಾತ್ರವಾಗಿದೆ.
ಈ ಬಾರಿ ಈ ಹಾಡು ವೈರಲ್ ಆಗುವುದಕ್ಕೆ ಕಾರಣ ತಾಂಜಾನಿಯಾದ ಇನ್ಫ್ಲುಯೆನ್ಸರ್ಸ್ ಆದ ಕಿಲಿ ಪೌಲ್ ಮತ್ತು ಆತನ ಸಹೋದರಿ ನೀಮಾ ಪೌಲ್. ಜೂಮ್ ಹಾಡಿಗೆ ಕಿಲಿ ಪೌಲ್ ಮತ್ತು ನೀಮಾ ಪೌಲ್ ಲಿಪ್ ಸಿಂಕ್ ಮಾಡಿದ್ದಾರೆ.
BIG NEWS: ವಿ.ಹೆಚ್.ಪಿ.ಯಿಂದ ಶ್ರೀರಂಗಪಟ್ಟಣ ಚಲೋ; ನಿಷೇಧಾಜ್ಞೆ ಉಲ್ಲಂಘಿಸಿದರೆ ಕಾನೂನು ಕ್ರಮ; ಎಸ್ ಪಿ ಎಚ್ಚರಿಕೆ
ಈ ಇನ್ಫ್ಲುಯೆನ್ಸರ್ಸ್ ಗಳಿಗೆ ಭಾರತದಲ್ಲಿ ಹೆಚ್ಚಿನ ಫಾಲೋಯರ್ಸ್ ಇದ್ದಾರೆ. ಹೀಗಾಗಿ, ಪಾಕ್ ಗಾಯಕ ಅಲಿ ಹಾಡು ಭಾರತೀಯ ಸಂಗೀತ ಪ್ರೇಮಿಗಳ ಮನಗೆದ್ದಿದೆ.
ಕಿಲಿ ಪೌಲ್ ಶೇರ್ ಮಾಡಿರುವ ಇನ್ಸ್ಟಾಗ್ರಾಂ ರೀಲ್ಗೆ `ಸಚ್ ಎ ಮಾಸ್ಟರ್ ಪೀಸ್’ ಎಂಬ ಶೀರ್ಷಿಕೆ ನೀಡಲಾಗಿದೆ. ತಾಂಜಾನಿಯಾದ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿರುವ ಕಿಲಿ ಪೌಲ್ ಮತ್ತು ನೀಮಾ ಪೌಲ್ ಸಹಜವಾಗಿ ಹಾಡುತ್ತಿರುವಂತೆ ನಟಿಸಿದ್ದಾರೆ. ಈ ರೀಲ್ 11 ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಮತ್ತು 1.5 ಲಕ್ಷ ಲೈಕ್ಸ್ ಪಡೆದುಕೊಂಡಿದೆ.
ಶೇರ್ ಷಾ ಹಾಡು `ರಾತನ್ ಲಂಬಿಯಾನ್’ಗೆ ಕಿಲಿ ಪೌಲ್ ಮತ್ತು ಆತನ ಸಹೋದರಿ ನೀಮಾ ಪೌಲ್ ಲಿಪ್ ಸಿಂಕ್ ಮಾಡಿದ್ದು ವೈರಲ್ ಆಗಿ, ಪ್ರಸಿದ್ಧಿಗೆ ಬಂದ ಇನ್ಫ್ಲುಯೆನ್ಸರ್ಸ್ ಇವರು.
ಅಂದು ಸಿದ್ಧಾಥ್ ಮಲ್ಹೋತ್ರಾ, ಕಿಯಾರಾ ಆಡ್ವಾಣಿ ಮುಂತಾದ ಸೆಲೆಬ್ರಿಟಿಗಳಿಂದ ಪ್ರತಿಕ್ರಿಯೆಯನ್ನೂ ಪಡೆದುಕೊಂಡಿದ್ದರು. ಕಿಲಿ ಪೌಲ್ಗೆ 36 ಲಕ್ಷ ಇನ್ಸ್ಟಾಗ್ರಾಂ ಫಾಲೋಯರ್ಸ್ ಇದ್ದಾರೆ.
https://youtu.be/Dcu05A2wdyo