alex Certify ಬೈಕ್ ಗುದ್ದಿ ಸವಾರರ ಮೇಲೆಯೇ ಹರಿದ ಕಾರು: ವ್ಯಕ್ತಿಯ ಸಮಯ ಪ್ರಜ್ಞೆಯಿಂದ ಇಬ್ಬರೂ ಸೇಫ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೈಕ್ ಗುದ್ದಿ ಸವಾರರ ಮೇಲೆಯೇ ಹರಿದ ಕಾರು: ವ್ಯಕ್ತಿಯ ಸಮಯ ಪ್ರಜ್ಞೆಯಿಂದ ಇಬ್ಬರೂ ಸೇಫ್

Viral Video: Strangers Rush to Save Biker Trapped Beneath a Car, Internet Hails Humanity | Watch

ಸೋಶಿಯಲ್ ಮೀಡಿಯಾದಲ್ಲಿ ಕ್ಷಣ ಕ್ಷಣಕ್ಕೂ ಒಂದಕ್ಕಿಂತ ಒಂದು ಚಿತ್ರ ವಿಚಿತ್ರ ಅಷ್ಟೆ ಇಂಟ್ರಸ್ಟಿಂಗ್ ಆಗಿರೋ ವಿಡಿಯೋಗಳು ಅಪ್ಲೋಡ್ ಆಗ್ತಾನೇ ಇರುತ್ತೆ. ಕೆಲವು ಫನ್ನಿ ಅನ್ಸಿದ್ರೆ, ಇನ್ನು ಕೆಲವು ಅದ್ಭುತ ಅನಿಸೋ ಹಾಗಿರುತ್ತೆ. ಈಗ ಅಂತಹದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಮನುಷ್ಯ ಸಮಯ ಬಂದಾಗ ನಿಸ್ವಾರ್ಥ ಮನಸ್ಸಿನಿಂದ ಸಹಾಯ ಮಾಡುತ್ತಾನೆ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

ಅದು ಸೌತ್‌ಕರೋಲಿನಾದ ಮ್ರೆಟಲ್ ಬೀಚ್, ಅದೇ ಬೀಚ್ ಬಳಿ ಇರುವಂತಹ ಸಿಗ್ನಲ್ ಬಳಿ ಒಂದು ಅನಾಹುತ ನಡೆಯುತ್ತೆ. ಆ ವಿಶಾಲ ರಸ್ತೆಯಲ್ಲಿ ಎರಡು ಬೈಕ್‌ಗಳು ಹೋಗ್ತಾ ಇರುತ್ತೆ. ಒಂದು ಬೈಕ್ ಮೇಲೆ ಒಬ್ಬನೇ ವ್ಯಕ್ತಿ ಬೈಕ್ ರೈಡ್ ಮಾಡ್ತಿದ್ರೆ, ಇನ್ನೊಂದು ಬೈಕ್ ಮೇಲೆ ಜೋಡಿಯೊಂದು ಹೋಗ್ತಾ ಇರುತ್ತೆ. ಇಬ್ಬರು ಕೂತಿದ್ದ ಬೈಕ್ ಹಿಂದೆ ಕಾರೊಂದು ಬರುತ್ತಿರುತ್ತೆ. ಸಿಗ್ನಲ್ ಬಳಿ ಬಂದ ತಕ್ಷಣ ಬೈಕ್ ಕೊಂಚ ನಿಧಾನವಾಗುತ್ತೆ. ಅದೇ ಕ್ಷಣದಲ್ಲಿ ಬೈಕ್ ಹಿಂದೆ ಇದ್ದ ಕಾರು, ಬೈಕ್‌ನ್ನ ಗುದ್ದಿ ಅದೇ ಬೈಕ್ ಮೇಲಿದ್ದ ವ್ಯಕ್ತಿಯ ಮೇಲೆಯೇ ಹತ್ತಿ ಬಿಡುತ್ತೆ.

1.26 ಸೆಕೆಂಡುಗಳಲ್ಲೇ ರೂಬಿಕ್ಸ್ ಕ್ಯೂಬ್ ಪರಿಹಾರ; ಇಲ್ಲಿದೆ ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ

ಅದೇ ರಸ್ತೆಯಲ್ಲಿ ಕೊಂಚ ದೂರದಲ್ಲಿ ಹೋಗುತ್ತಿದ್ದ ಬೈಕ್ ರೈಡರ್ ಅದನ್ನ ಗಮನಿಸಿದ ತಕ್ಷಣವೇ, ತನ್ನ ಬೈಕ್‌ನ್ನ ಸೈಡಿಗೆ ಹಾಕಿ, ಕಾರಿನ ಬಳಿ ಬಂದು, ಕಾರಿನ ಕೆಳಗೆ ಸಿಕ್ಕಾಕಿಕೊಂಡ ವ್ಯಕ್ತಿಯನ್ನ ಹೊರಗೆ ಎಳೆಯಲು ಪ್ರಯತ್ನಿಸುತ್ತಾನೆ. ಅದು ಆತನೊಬ್ಬನಿಂದ ಸಾಧ್ಯವಾಗದೇ ಇದ್ದಾಗ, ಬೇರೆಯವರನ್ನ ಸಹಾಯಕ್ಕೆ ಕರೆಯುತ್ತಾನೆ. ಆ ವ್ಯಕ್ತಿಯ ಸಮಯ ಪ್ರಜ್ಞೆಯಿಂದ ಕಾರಿನ ಕೆಳಗೆ ಸಿಕ್ಕಾಕಿಕೊಂಡಿರೋ ವ್ಯಕ್ತಿ ಯಾವುದೇ ಅಪಾಯವಿಲ್ಲದೇ ಬಚಾವ್ ಆಗುತ್ತಾನೆ.

ಅಸಲಿಗೆ ಕಾರು ನಿಯಂತ್ರಣ ಕಳೆದುಕೊಂಡಿರೋದ್ರಿಂದ ಈ ಘಟನೆ ಸಂಭವಿಸಿದೆ. ಬೈಕ್ ಮೇಲಿದ್ದ ವ್ಯಕ್ತಿಗೆ ಹೆಚ್ಚಿನ ಅಪಾಯ ಏನೂ ಸಂಭವಿಸಿರಲಿಲ್ಲ. ಆ ವ್ಯಕ್ತಿಯನ್ನ ಜೊತೆಗಿದ್ದ ಮಹಿಳೆಗೆ ಚಿಕ್ಕಪುಟ್ಟ ಗಾಯಗಳಾಗಿರುತ್ತೆ. ತಕ್ಷಣವೇ ಇಬ್ಬರನ್ನ ಅಲ್ಲೇ ಇದ್ದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಈಗ ಇಬ್ಬರೂ ಸೇಫ್ ಆಗಿದ್ದಾರೆ.

ಇಂದಿನ ಕಾಲದಲ್ಲಿ ಯಾರಿಗೆ ಏನಾದ್ರೆ ಏನು ಅನ್ನೊ ಮನಸ್ಥಿತಿಯ ಜನರ ನಡುವೆ ಹೀಗೆ ಸಹಾಯಕ್ಕೆ ತಕ್ಷಣಕ್ಕೆ ಧಾವಿಸಿ ಬರುವವರು ಕಡಿಮೆ ಜನ. ಇಂಥವರ ನಿಸ್ವಾರ್ಥ ಸೇವೆ ಬೇರೆಯವರಿಗೆ ಮಾದರಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...