ದ್ರಾವಿಡರ್ ಕಳಗಂ (ಡಿಕೆ) ಪಕ್ಷದ ಸದಸ್ಯರು ರ್ಯಾಲಿಯಲ್ಲಿ ಹಿಂದೂ ದೇವತೆಗಳ ವಿರುದ್ಧ ಅವಹೇಳನಕಾರಿ ಘೋಷಣೆ ಕೂಗಿದ್ದಕ್ಕೆ ಮತ್ತು ಹಿಂದೂ ಆಚರಣೆಗಳನ್ನು ಅವಮಾನಿಸಿದ ಕಾರಣಕ್ಕೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮೇ 29 ರಂದು ನಡೆದ ರ್ಯಾಲಿಯಲ್ಲಿ ಘೋಷಣೆ ಹಾಕಲ್ಪಟ್ಟಿದ್ದವು. ಈ ಘೋಷಣೆಯ ವಿಡಿಯೋವನ್ನು ಮಧುರೈ ಪೊಲೀಸರ ಮುಂದೆ ಹಿಂದೂ ಮಕ್ಕಳ್ ಕಚ್ಚಿ ಎಂಬ ಸಂಘಟನೆ ಸಲ್ಲಿಸಿ, ಘೋಷಣೆಗಳನ್ನು ಕೂಗಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದರು.
ಹೊಸ ಮರ್ಸಿಡೆಸ್ ಬೆಂಜ್ ಜಿ63 ಖರೀದಿಸಿದ ಶ್ರೇಯಸ್ ಅಯ್ಯರ್
ಘೋಷಣೆಗಳಲ್ಲಿ ಶ್ರೀಕೃಷ್ಣನ ಬಗ್ಗೆ ವಿವಾದಾತ್ಮಕ ಹೇಳಿಕೆಗಳು ಸೇರಿವೆ. ಅಲ್ಲಿ ಭಾಗಿಯಾದವರು ದೇಹ ಚುಚ್ಚುವಿಕೆಯನ್ನು ಒಳಗೊಂಡಂತೆ ಹಿಂದೂ ಆಚರಣೆಗಳನ್ನು ಸಹ ಪ್ರಶ್ನಿಸಿದ್ದರು. ಅಯ್ಯಪ್ಪ ದೇವರು ಎಂಬ ಹೇಳಿಕೆಯನ್ನು ನಾವು ಹೇಗೆ ಒಪ್ಪಿಕೊಳ್ಳುವುದು? ಎಂದೂ ಸಹ ಘೋಷಣೆ ಕೇಳಿಬಂದಿದ್ದವು.
ಧಾರ್ಮಿಕ ಭಾವನೆಗಳಿಗೆ ಧಕ್ಕೆ, ನಂಬಿಕೆ- ಆಚರಣೆಗೆ ಧಕ್ಕೆ ವಿಚಾರವಾಗಿ ಮೂರು ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.