ನವದೆಹಲಿ: ಚಿನ್ನ ಮತ್ತು ಬೆಳ್ಳಿ ದರ ಮತ್ತೆ ಏರಿಕೆ ಕಂಡಿದೆ. ದೆಹಲಿಯ ಚಿನಿವಾರಪೇಟೆಯಲ್ಲಿ ಗುರುವಾರ ಚಿನ್ನ ಮತ್ತು ಬೆಳ್ಳಿ ದರ ಹೆಚ್ಚಾಗಿದೆ.
ಬೆಳ್ಳಿ ದರ ಕೆಜಿಗೆ 918 ರೂಪಾಯಿ ಏರಿಕೆ ಕಂಡಿದ್ದು, 61,776 ರೂಪಾಯಿಗೆ ತಲುಪಿದೆ. 10 ಗ್ರಾಂ ಚಿನ್ನದ ದರ 434 ರೂಪಾಯಿ ಹೆಚ್ಚಳವಾಗಿದ್ದು, 50,887 ರೂಪಾಯಿಗೆ ತಲುಪಿದೆ.
ಜಾಗತಿಕ ಮಾರುಕಟ್ಟೆಯಲ್ಲಿನ ಚಿನ್ನದ ಬೇಡಿಕೆ ಮತ್ತು ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಉಂಟಾದ ಪರಿಣಾಮಗಳಿಂದಾಗಿ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆ ಕಂಡಿದೆ ಎಂದು ಹೇಳಲಾಗಿದೆ.