alex Certify ಮದುವೆಯಾದ ಮೊದಲ ವರ್ಷ ಮರೆತೂ ಮಾಡಬೇಡಿ ಈ ಕೆಲಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮದುವೆಯಾದ ಮೊದಲ ವರ್ಷ ಮರೆತೂ ಮಾಡಬೇಡಿ ಈ ಕೆಲಸ

ಹಿಂದು ಧರ್ಮದಲ್ಲಿ ಮದುವೆಗೆ ಮಹತ್ವದ ಸ್ಥಾನವಿದೆ. ಎರಡು ಹೃದಯದ ಜೊತೆ ಎರಡು ಕುಟುಂಬ ಒಂದಾಗುವ ಸುದಿನವದು. ಜೀವನಪೂರ್ತಿ ದಂಪತಿ ಒಂದಾಗಿ ಬಾಳಲಿ ಎಂದು ಹಿರಿಯರು ಹಾರೈಸ್ತಾರೆ. ಸುಖ, ಸಂತೋಷ, ಸಮೃದ್ಧಿ ಜೀವನಕ್ಕಾಗಿ ಜಾತಕ ನೋಡಿ ಮದುವೆ ಮಾಡಿಸಲಾಗುತ್ತದೆ.

ಮದುವೆಯಾದ ಆರಂಭದಲ್ಲಿ ಮಾಡುವ ಅನೇಕ ತಪ್ಪುಗಳು ಮುಂದಿನ ಜೀವನವನ್ನು ಕಷ್ಟಕ್ಕೆ ನೂಕುತ್ತದೆ. ಮೊದಲ ವರ್ಷ ಸಂಗಾತಿ ಮರೆತೂ ಕೆಲವೊಂದು ಕೆಲಸಗಳನ್ನು ಮಾಡಬಾರದು.

ಹನಿಮೂನ್ ಗಾಗಿ ಎಂದೂ ಯಾವುದೇ ತೀರ್ಥಸ್ಥಳಕ್ಕೆ ಹೋಗಬೇಡಿ. ಭಗವಂತ ಶಿವನ ದೇವಾಲಯವಿರುವ ಯಾವುದೇ ಸ್ಥಳಕ್ಕೆ ಹನಿಮೂನ್ ಗೆಂದು ಹೋಗಬೇಡಿ. ಶಿವ ಏಕಾಂತವಾಸಿ. ಆತನ ದೇವಸ್ಥಾನಕ್ಕೆ ಹೋಗುವ ದಂಪತಿಗೆ ಪಾಲಕರಾಗುವ ಸೌಭಾಗ್ಯ ಸಿಗುತ್ತದೆ. ಆದ್ರೆ ಹುಟ್ಟುವ ಮಗು ಏಕಾಂತ ವಾಸಿ ಅಥವಾ ಲೌಕಿಕ ಜಗತ್ತಿನಿಂದ ದೂರವಿರಲು ಬಯಸುವ ಸನ್ಯಾಸಿಯಾಗುವ ಸಾಧ್ಯತೆ ಇರುತ್ತದೆ.

ಪುರುಷರು ಶಿವಲಿಂಗದ ದರ್ಶನ ಮಾಡಿ ಪೂಜೆ ಮಾಡಬಹುದು. ಆದ್ರೆ ಮಹಿಳೆಯರು ಒಂದು ವರ್ಷದವರೆಗೆ ಶಿವನ ದೇವಸ್ಥಾನಕ್ಕೆ ಹೋಗದಿರುವುದು ಒಳಿತು. ಮಹಿಳೆಯರು ದೇವಿ ಪಾರ್ವತಿಯ ಪೂಜೆ ಮಾಡಬೇಕು. ಜೊತೆಗೆ ಪಾರ್ವತಿಗೆ ಪ್ರಿಯವಾಗುವ ಮಂತ್ರವನ್ನು ಜಪಿಸಬೇಕು. ದಂಪತಿ ಒಟ್ಟಿಗೆ ಶಿವ ದರ್ಶನ ಮಾಡಬಯಸಿದ್ರೆ ಮದುವೆಯಾಗಿ ಒಂದು ವರ್ಷದವರೆಗೆ ತಂದೆ-ತಾಯಿಯಾಗುವ ನಿರ್ಧಾರ ತೆಗೆದುಕೊಳ್ಳಬೇಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...