ಮಕ್ಕಳು ಹಠ ಮಾಡಿದ್ರೆ ಸಾಕು, ಮಕ್ಕಳು ಸಮಾಧಾನ ಆದರೆ ಸಾಕು ಅಂತ ಪಾಲಕರು ಏನು ಬೇಕಾದ್ರೂ ಮಾಡ್ತಾರೆ. ಇಲ್ಲೂ ಕೂಡಾ 17 ವರ್ಷದ ಬಾಲಕ ಕಾರು ಓಡಿಸ್ತೇನೆ ಅಂತ ಹಠ ಹಿಡಿದಿದ್ದಾನೆ, ಮಗ ಕೇಳಿದ್ದಾನಲ್ಲ ಅಂತ ಕಾರನ್ನ ಮಗನಿಗೆ ಕೊಟ್ಟಿದ್ದಾರೆ. ಆ ತಪ್ಪಿಗೆ, ಆತನ ತಂದೆ ಭಾರಿ ಬೆಲೆ ಕಟ್ಟಬೇಕಾಗಿದೆ.
ಈ ಘಟನೆ ನಡೆದಿರೋದು ಲುಧಿಯಾನಾದ ಝಾಂಸ್ ಅನ್ನೊ ಪಟ್ಟಣದಲ್ಲಿ. ಇಲ್ಲಿ 17 ವರ್ಷದ ಬಾಲಕ ತನ್ನ ತಂದೆಯ ಕಾರನ್ನ ಓಡಿಸುತ್ತಿದ್ದ. ಅಲ್ಲಿಯೇ ಇದ್ದ ಪೊಲೀಸರು ಬಾಲಕನಿಗೆ ತಡೆಹಿಡಿದಿದ್ದಾರೆ.
18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಬೈಕ್ ಅಥವಾ ಕಾರು ಓಡಿಸೋದು ಮೋಟಾರು ವಾಹನ ಕಾಯಿದೆ 180ರ ಪ್ರಕಾರ ನಿಷೇಧ. ಆದರೂ ಈ ಕಾಯ್ದೆಯನ್ನ ಉಲ್ಲಂಘಿಸಿದ್ದರೆ, ಒಂದು ತಿಂಗಳ ಜೈಲು ಹಾಗೂ ದಂಡ ವಿಧಿಸಲಾಗುತ್ತೆ. ಅದೇ ಪ್ರಕಾರ ಈಗ ಮಗನ ಕೈಗೆ ಕಾರು ಕೊಟ್ಟ ತಪ್ಪಿಗಾಗಿ ಉದ್ಯಮಿ ಅಶ್ವಿನಿ ನರುಲಾ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ.
ಕಾರಿನ ಡ್ರೈವಿಂಗ್ ಸೀಟ್ಲ್ಲಿ ಕೂತಿದ್ದ ಬಾಲಕ ಪೊಲೀಸರನ್ನ ನೋಡಿದಾಕ್ಷಣ ಭಯಭಿತನಾಗಿದ್ದಾನೆ. ತಕ್ಷಣವೇ ಕಾರನ್ನ ಹಿಂದೆ ತಿರುಗಿಸಿಕೊಳ್ಳುವುದಕ್ಕೆ ಪ್ರಯತ್ನ ಪಟ್ಟಿದ್ದಾನೆ. ಆದರೆ ಅದು ಸಾಧ್ಯವಾಗದೇ ಅಲ್ಲೇ ಇದ್ದ ಕಾರ್ ಡಿವೈರ್ಗೆ ಹೋಗಿ ಗುದ್ದಿದ್ದಾನೆ.
ಕಾರಿನಲ್ಲಿದ್ದ ಡಾಕ್ಯುಮೆಂಟ್ ಪೇಪರ್ಸ್ಗಳನ್ನ ಪರೀಕ್ಷಿಸಿದಾಗಲೇ ಪೊಲೀಸರಿಗೂ ಗೊತ್ತಾಗಿದ್ದು ಬಾಲಕನ ವಯಸ್ಸು 17 ವರ್ಷ ಅಂತ. ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ವಾಹನ ಓಡಿಸೋದು ಅಪರಾಧ. ಅದು ಗೊತ್ತಿದ್ದರೂ ಈ ಬಾಲಕ ತನ್ನ ತಂದೆಯ ಕಾರನ್ನ ತೆಗೆದುಕೊಂಡು ಗೆಳೆಯರ ಜೊತೆಗೆ ಸುತ್ತಾಡೋಕೆ ಹೋಗಿದ್ದಾರೆ. ಈಗ ಮಗ ಮಾಡಿರೋ ತಪ್ಪಿಗೆ ಅಶ್ವಿನಿ ನರುಲಾ ಭಾರಿ ಬೆಲೆಯ ದಂಡ ಕಟ್ಟಿದ್ದಾರೆ.