ಬೆಂಗಳೂರು: ಪಠ್ಯ ಬದಲಾವಣೆ ವಿವಾದಕ್ಕೆ ಸಂಬಂಧಿಸಿದಂತೆ ಸಾಹಿತ್ಯ ವಲಯದಲ್ಲಿ ಅನಿರೀಕ್ಷಿತ ಬೆಳವಣಿಗೆ ನಡೆದಿವೆ. ಅಸಮಾಧಾನಗೊಂಡ ಅನೇಕ ಸಾಹಿತಿಗಳು ವಿವಿಧ ಅಕಾಡೆಮಿಗಳಿಗೆ ರಾಜೀನಾಮೆ ನೀಡತೊಡಗಿದ್ದು, ಕೆಲವರು ಪಠ್ಯದಲ್ಲಿ ತಮ್ಮ ಕವನ, ಪಾಠ ಕೈಬಿಡಬೇಕೆಂದು ಪತ್ರ ಬರೆಯತೊಡಗಿದ್ದಾರೆ.
ಇದಕ್ಕೆ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಪ್ರತಿಕ್ರಿಯೆ ನೀಡಿ, ಸುಳ್ಳಿನ ಕಥೆ ಹೆಣೆಯುವಲ್ಲಿ ಪಳಗಿರುವ ಕಾಂಗ್ರೆಸ್ ಕೃಪಾಪೋಷಿತ ಸಾಹಿತಿಗಳ ಬಳಗವಿಂದು ತಮ್ಮ ಬೇಳೆ ಬೇಯಿಸಿಕೊಳ್ಳಲಾಗದೇ ಕಂಪಿಸುತ್ತಿದೆ. ‘ಟೂಲ್ ಕಿಟ್ ರೆಸಿಗ್ನೇಷನ್’ ತಂತ್ರ ಬಳಸಿ ಸಿಂಪತಿ ಗಿಟ್ಟಿಸಿಕೊಳ್ಳಬಯಸುವ ಇಂಥವರ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಯಾವುದೇ ಮರುಕವಿಲ್ಲ. ಇವರಿಗೆ ನೂತನ ಪಠ್ಯಕ್ರಮ ಪಥ್ಯವಾಗದ ಮಾತ್ರಕ್ಕೆ ಬದಲಾಯಿಸಲಾಗದು ಎಂದು ಹೇಳಿದ್ದಾರೆ.