ಬಿಸಿ ರಕ್ತದ ಯುವಕರಿಗೆ ಹುಚ್ಚಾಟ ಆಡೋದ್ರಲ್ಲಿ ಅದೇನೋ ಒಂದು ಥ್ರಿಲ್. ಬೈಕ್ ವೀಲ್ಹಿಂಗ್ ಮಾಡೋದು. ಎತ್ತರದ ಬಿಲ್ಡಿಂಗ್ನಿಂದ ಹಾರೋದು…..ಹೀಗೆ ಹುಚ್ಚಾಟ ಆಡೋದು ಒಂದಾ..? ಎರಡಾ..? ಅದೇ ರೀತಿ ಇಲ್ಲಿ ಒಬ್ಬ ವಿದ್ಯಾರ್ಥಿ ರೈಲಿನ ಫುಟ್ಬೋರ್ಡ್ನಲ್ಲಿ ನಿಂತು ಕಸರತ್ತು ಮಾಡಿ ಹಿರೋ ಹಾಗೆ ಪೋಸ್ ಕೊಡೋದಕ್ಕೆ ಹೋಗಿದ್ದಾನೆ. ಕೊನೆಗೆ ಬ್ಯಾಲೆನ್ಸ್ ತಪ್ಪಿ ಆತ ಸತ್ತೇ ಹೋಗಿದ್ದಾನೆ.
ತಮಿಳುನಾಡಿನ ತಿರುವಲಂಗಾಡು ಮೂಲದ ನೀತಿದೇವನ್ ದುರ್ಘಟನೆಯಲ್ಲಿ ಸಾವನ್ನಪ್ಪಿರೋ ವಿದ್ಯಾರ್ಥಿಯಾಗಿದ್ಧಾನೆ. ನೀತಿದೇವನ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿಎ ಓದುತ್ತಿದ್ದ ವಿದ್ಯಾರ್ಥಿಯಾಗಿದ್ದ. ಈತ ರೈಲಿನ ಫುಟ್ಬೋರ್ಡ್ನಲ್ಲಿ ನಿಂತಾಗ ಆಯತಪ್ಪಿ ಬಿದ್ದಿದ್ದಾನೆ. ತಕ್ಷಣವೇ ಆತನನ್ನ ತಿರುವಳ್ಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಚಲಿಸುತ್ತಿರೋ ರೈಲಿನ ಬಾಗಿಲಲ್ಲಿ ನಿಂತು ಯುವಕರು ಹುಚ್ಚಾಟ ಆಡೋದು, ರೈಲಿನ ಟಾಪ್ ಹತ್ತಿ ಕೋತಿಯಾಟ ಆಡೋ ದೃಶ್ಯಗಳು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಾ ಇರುತ್ತೆ. ಇದರಿಂದ ಅಪಾಯ ಇದೆ ಅನ್ನೋ ಅರಿವಿದ್ದರೂ ಕೆಲವರು ಹುಚ್ಚಾಟ ಆಡೋದನ್ನ ಬಿಡ್ತಿಲ್ಲ. ಈ ರೀತಿಯ ಹುಚ್ಚಾಟ ಆಡೋದೇ ದೊಡ್ಡ ಸಾಹಸದ ಕೆಲಸ ಅಂತ ಅಂದುಕೊಂಡು ಹೀಗೆ ಹುಚ್ಚಾಟ ಆಡ್ತಿರ್ತಾರೆ. ಆದರೆ ಕೊನೆಗೊಮ್ಮೆ ಗ್ರಹಚಾರ ತಪ್ಪಿ ದಾರುಣವಾಗಿ ಸಾವನ್ನಪ್ಪುತ್ತಿದ್ದಾರೆ.