alex Certify BIG NEWS: ಪತಿಯ ಹಿಂಸೆ; 6 ಮಕ್ಕಳನ್ನು ಬಾವಿಗೆ ಎಸೆದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪತಿಯ ಹಿಂಸೆ; 6 ಮಕ್ಕಳನ್ನು ಬಾವಿಗೆ ಎಸೆದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಮುಂಬೈ: ಕುಟುಂಬದವರ ಹಿಂಸೆ, ಪತಿ ಥಳಿತದಿಂದ ಬೇಸತ್ತ ಮಹಿಳೆ ತನ್ನ 6 ಮಕ್ಕಳನ್ನು ಬಾವಿಗೆ ಎಸೆದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಅಮಾನವೀಯ ಘಟನೆ ಮಹಾರಾಷ್ಟ್ರದ ರಾಯಘಡ ಜಿಲ್ಲೆಯ ಖಾರವಲಿ ಗ್ರಾಮದಲ್ಲಿ ನಡೆದಿದೆ.

ಐದು ಹೆಣ್ಣು ಮಕ್ಕಳು, ಓರ್ವ ಬಾಲಕನನ್ನು ಮಹಿಳೆ ಬಾವಿಗೆ ಎಸೆದಿದ್ದು, ಬಾವಿಯಿಂದ ಮೇಲೆ ಬರಲಾಗದೇ 6 ಮಕ್ಕಳು ಮೃತಪಟ್ಟಿದ್ದಾರೆ. ಮಹಿಳೆಯನ್ನು ರಕ್ಷಿಸಲಾಗಿದೆ. ಕೌಟುಂಬಿಕ ಕಲಹಕ್ಕೆ ಬೇಸತ್ತು ಮಹಿಳೆ ಈ ಕೃತ್ಯವೆಸಗಿದ್ದಾಳೆ ಎನ್ನಲಾಗಿದೆ.

30 ವರ್ಷದ ಮಹಿಳೆಗೆ ಆಕೆಯ ಗಂಡ ಹಾಗೂ ಮನೆಯವರು ಪ್ರತಿದಿನ ಹಿಂಸಿಸುತ್ತಿದ್ದರು. ಅನಗತ್ಯ ಜಗಳ-ಕಿರಿಕಿರಿ, ಹಲ್ಲೆಯಿಂದಾಗಿ ನೊಂದಿದ್ದ ಮಹಿಳೆ ಬೇರೆ ದಾರಿ ಕಾಣದೇ ಮಕ್ಕಳನ್ನು ಕೊಂದು ತಾನೂ ಸಾಯಬೇಕು ಎಂದು ನಿರ್ಧರಿಸಿ ಹೀಗೆ ಮಾಡಿದ್ದಾಳೆ. ಮಕ್ಕಳನ್ನು ಕೊಂದ ಆರೋಪದಲ್ಲಿ ಇದೀಗ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಅಶೋಕ್ ದುಧೆ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...