alex Certify Shocking: ಕರ್ನಾಟಕದಲ್ಲಿ ಗುಟ್ಕಾ ಜಗಿಯುವವರ ಸಂಖ್ಯೆಯಲ್ಲಿ ಹೆಚ್ಚಳ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking: ಕರ್ನಾಟಕದಲ್ಲಿ ಗುಟ್ಕಾ ಜಗಿಯುವವರ ಸಂಖ್ಯೆಯಲ್ಲಿ ಹೆಚ್ಚಳ….!

ಜೀವಕ್ಕೆ ಮಾರಕವಾಗಿರುವ ತಂಬಾಕು ಸೇವನೆ ಪ್ರಮಾಣ ರಾಷ್ಟ್ರೀಯ ಮಟ್ಟದಲ್ಲಿ 27.3 ರಷ್ಟು ಇಳಿಕೆಯಾಗಿದ್ದರೆ, ಕರ್ನಾಟಕದ ಯುವ ಸಮುದಾಯ ಗುಟ್ಕಾ ಅಥವಾ ಪಾನ್ ಮಸಾಲ ಸೇವನೆಯನ್ನು ಹೆಚ್ಚು ಮಾಡಿದ್ದಾರೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ಈ ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿದೆ. ಕರ್ನಾಟಕದಲ್ಲಿ ಯುವ ಸಮುದಾಯದಲ್ಲಿ ಗುಟ್ಕಾ ಅಥವಾ ಪಾನ್ ಮಸಾಲ ಉತ್ಪನ್ನಗಳ ಬಳಕೆ 9.6% ರಿಂದ 10.4% ಕ್ಕೆ ಹೆಚ್ಚಳವಾಗಿದೆ.

ರಾಜ್ಯದಲ್ಲಿ ನಗರ ಪ್ರದೇಶ ಮತ್ತು ಗ್ರಾಮಾಂತರ ಪ್ರದೇಶದಲ್ಲಿನ ಪುರುಷ ಧೂಮಪಾನಿಗಳ ಸಂಖ್ಯೆ 17.6 ರಿಂದ 12.2 ಕ್ಕೆ ಇಳಿಕೆಯಾಗಿದೆ. ಬೀಡಿ ಸೇದುವವರ ಪ್ರಮಾಣ 8.3 ರಿಂದ 3.6% ಕ್ಕೆ ಇಳಿಕೆಯಾಗಿದೆ. ರಾಜ್ಯದಲ್ಲಿ 30,455 ಮಹಿಳೆಯರು ಮತ್ತು 4,120 ಪುರುಷರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.

ಮಧುಮೇಹ ನಿಯಂತ್ರಿಸಲು ಸಹಕಾರಿ ಈ ತರಕಾರಿ

ಎನ್ಎಫ್ಎಚ್ಎಸ್-5 ವರದಿ ಪ್ರಕಾರ ಒಂದು ದಿನದಲ್ಲಿ 5 ಕ್ಕಿಂತ ಕಡಿಮೆ ಸಿಗರೇಟು ಸೇವನೆ ಮಾಡುತ್ತೇವೆ ಎಂದು ಗ್ರಾಮೀಣ ಪ್ರದೇಶದ ಜನರು ಹೇಳಿದ್ದಾರೆ.

ಒಟ್ಟಾರೆ 69.3% ರಷ್ಟು ಜನರು 5 ಕ್ಕಿಂತ ಕಡಿಮೆ ಸಿಗರೇಟ್ ಸೇವನೆ ಮಾಡುವುದಾಗಿ ಹೇಳಿಕೊಂಡಿದ್ದಾರೆ. ಈ ಪೈಕಿ 63.3% ರಷ್ಟು ಮಂದಿ ನಗರ ಪ್ರದೇಶದವರು, 74.2 % ರಷ್ಟು ಮಂದಿ ಗ್ರಾಮೀಣ ಪ್ರದೇಶದವರಾಗಿದ್ದಾರೆ.

ಇನ್ನು ದಿನವೊಂದರಲ್ಲಿ 5 ರಿಂದ 9 ಸಿಗರೇಟ್ ಸೇವನೆ ಮಾಡುವವರ ಸಂಖ್ಯೆ ನಗರ ಪ್ರದೇಶದಲ್ಲಿ ಶೇ.18.3 ರಷ್ಟಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಶೇ.15 ರಷ್ಟಿದೆ. ಇನ್ನೊಂದು ಆಘಾತಕಾರಿ ಅಂಶವೆಂದರೆ ನಗರ ಪ್ರದೇಶದಲ್ಲಿ ದಿನಕ್ಕೆ 10 ರಿಂದ 14 ಸಿಗರೇಟ್ ಸೇದುವವರ ಸಂಖ್ಯೆ ನಗರದಲ್ಲಿ ಶೇ.11.3 ರಷ್ಟಿದ್ದರೆ, ಗ್ರಾಮೀಣ ಪ್ರದೇಶದಲ್ಲಿ ಶೇ.3.9 ರಷ್ಟಿದೆ.

ರಾಷ್ಟ್ರೀಯ ಮಟ್ಟದಲ್ಲಿ ನಗರ ಪ್ರದೇಶದ ಶೇ.14.6 ರಷ್ಟು ಜನರು ಸಿಗರೇಟ್ ಸೇದಿದರೆ, ಶೇ.12.5 ರಷ್ಟು ಗ್ರಾಮೀಣ ಜನರು ಸಿಗರೇಟ್ ಸೇದುತ್ತಿದ್ದಾರೆ. 15 ರಿಂದ 49 ವರ್ಷದವರೆಗಿನ ಶೇ.13.2 ರಷ್ಟು ಜನರು ಧಮ್ ಹೊಡೆದರೆ, 15 ರಿಂದ 45 ರ ವಯೋಮಾನದವರ ಪ್ರಮಾಣ ಶೇ.13.3 ರಷ್ಟಿದೆ.

ಇನ್ನು ಗ್ರಾಮಾಂತರದಲ್ಲಿ ಬೀಡಿ ಸೇದುವವರ ಪ್ರಮಾಣ ಹೆಚ್ಚಿದ್ದು, ಶೇ.8.3 ರಷ್ಟು ಜನರು ಬೀಡಿಗೆ ಮೊರೆ ಹೋಗುತ್ತಿದ್ದಾರೆ. ನಗರ ಪ್ರದೇಶದಲ್ಲಿ ಇದರ ಪ್ರಮಾಣ ಶೇ.4.3 ರಷ್ಟಿದೆ. ಇದೇ ವೇಳೆ, ಪಾನ್ ಮಸಾಲ ಅಥವಾ ಗುಟ್ಕಾ ಜಗಿಯುವವರ ಸಂಖ್ಯೆ ರಾಷ್ಟ್ರೀಯ ಮಟ್ಟದಲ್ಲಿ ಶೇ.1.4 ರಷ್ಟಿದೆ. 15 ರಿಂದ 49 ರ ವಯೋಮಾನದ ಜನರ ಪೈಕಿ ನಗರ ಪ್ರದೇಶದ ಶೇ.1 ರಷ್ಟು ಹಾಗೂ ಗ್ರಾಮಾಂತರ ಪ್ರದೇಶದ 1.6 ರಷ್ಟು ಮಹಿಳೆಯರು ಗುಟ್ಕಾ ಜಗಿಯುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...