alex Certify BIG NEWS: ಮಾರ್ಗ ಮಧ್ಯೆಯೇ ಕೆಟ್ಟು ನಿಂತ ಮೆಮೋ ರೈಲು; ಪ್ರಯಾಣಿಕರ ಪರದಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಾರ್ಗ ಮಧ್ಯೆಯೇ ಕೆಟ್ಟು ನಿಂತ ಮೆಮೋ ರೈಲು; ಪ್ರಯಾಣಿಕರ ಪರದಾಟ

ಬೆಂಗಳೂರು: ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಮೆಮೋ ರೈಲು ಮಾರ್ಗ ಮಧ್ಯೆಯೇ ಏಕಾಏಕಿ ಕೆಟ್ಟು ನಿಂತಿದ್ದು ಪ್ರಯಾಣಿಕರು ಪರದಾಡುತ್ತಿರುವ ಘಟನೆ ಕೆಂಗೇರಿ ಬಳಿ ನಡೆದಿದೆ.

ಮೆಮೋ ರೈಲಿನ ಎಂಜಿನ್ ನಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಚಲಿಸುತ್ತಿದ್ದ ರೈಲು ಇದ್ದಕ್ಕಿದ್ದಂತೆ ನಿಂತುಬಿಟ್ಟಿದೆ. ಕಳೆದ ಎರಡು ಗಂಟೆಯಿಂದ ರೈಲು ನಿಲುಗಡೆಯಾಗಿದ್ದು, ಎಂಜಿನ್ ಬದಲಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ನನಗೆ ನಿರೀಕ್ಷೆ ಇರಲಿಲ್ಲ, ಇದು ಸಂಪೂರ್ಣ ರಾಯರ ಆಶಿರ್ವಾದ; ರಾಜ್ಯಸಭೆಗೆ ಬಿಜೆಪಿಯಿಂದ ಟಿಕೆಟ್ ಬಗ್ಗೆ ಸಂತಸ ಹಂಚಿಕೊಂಡ ನಟ ಜಗ್ಗೇಶ್

ರೈಲು ಕೆಟ್ಟು ನಿಂತ ಹಿನ್ನೆಲೆಯಲ್ಲಿ ರೈಲಿನಲ್ಲಿದ್ದ ಪ್ರಯಾಣಿಕರು ಪರ್ಯಾಯ ವ್ಯವಸ್ಥೆ ಇಲ್ಲದೇ ಪರದಾಡಿದ್ದಾರೆ. ಇನ್ನು ಕೆಲ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಮಾರ್ಗ ಮಧ್ಯೆ ಈ ಅವ್ಯವಸ್ಥೆಯುಂಟಾಗಿದೆ. ಇಲ್ಲಿಂದ ಬೇರೆಡೆ ಹೋಗಲು ವಾಹನ ವ್ಯವಸ್ಥೆ ಇಲ್ಲ, ನಡೆದುಕೊಂಡು ಹೋಗಬೇಕಾದ ದುಸ್ಥಿತಿ ಎಂದು ಕಿಡಿಕಾರಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...