ಮಂಡ್ಯ: ಸಚಿವ ನಾರಾಯಣಗೌಡ ಹಾಗೂ ಮಂಡ್ಯ ಜಿಲ್ಲಾ ಜೆಡಿಎಸ್ ಅಧ್ಯಕ್ಷ ರಮೇಶ್ ನಡುವಿನ ವಾಗ್ದಾಳಿ ತಾರಕಕ್ಕೇರಿದೆ. ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಸೋಲಿಗೆ ನಾರಾಯಣಗೌಡ ಕಾರಣ ಎಂದು ಹೇಳಿದ್ದ ರಮೇಶ್ ವಿರುದ್ಧ ನನ್ನ ಬಗ್ಗೆ ಮಾತನಾಡಿದರೆ ಹುಷಾರ್ ಎಂದು ಸಚಿವರು ಆವಾಜ್ ಹಾಕಿದ್ದಾರೆ.
ಈ ಹಿಂದೆ ನನ್ನ ಬಳಿ ಬಂದು ಕಾಲು ಹಿಡಿದುಕೊಂಡಿದ್ದು ಮರೆತುಬಿಟ್ಟ್ಯಾ ? ನಾನು ಈವರೆಗೆ ಯಾರಿಗೂ ಹೆದರಿದವನಲ್ಲ, ನನ್ನ ಬಗ್ಗೆ ಮಾತನಾಡಿದರೆ ನಿನ್ನದೆಲ್ಲ ಓಪನ್ ಮಾಡುತ್ತೇನೆ ಎಂದು ಸಚಿವ ನಾರಾಯಣಗೌಡ ಗದರಿದ್ದಾರೆ.
BIG NEWS: ನಾಳೆ ಪೆಟ್ರೋಲ್ ಬಂಕ್ ಮಾಲೀಕರ ಮುಷ್ಕರ; ಪೆಟ್ರೋಲ್, ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯ ಸಾಧ್ಯತೆ
ಹೆಚ್.ಡಿ.ದೇವೇಗೌಡರ ಬಳಿ ಹೋಗಿ ಚಾಡಿ ಹೇಳುವುದು ನಿನ್ನ ಕೆಲಸ. ನಿಮಗೆ ತಾಕತ್ತಿದ್ದರೆ ಬಂದು ಚುನಾವಣೆ ಎದುರಿಸಿ. ಅದನ್ನು ಬಿಟ್ಟು ಇಲ್ಲಸಲ್ಲದ ಆರೋಪ ಮಾಡುವುದು ಬೇಡ ಎಂದು ಗುಡುಗಿದ್ದಾರೆ.