ರಾಜಕೀಯ ಚದುರಂಗದಾಟ ಹೇಗಿರುತ್ತೆ ಅನ್ನೋದನ್ನ ನಾವೆಲ್ಲ ನೋಡ್ತಾನೇ ಇರ್ತೆವೆ. ದಿನಕ್ಕೊಂದು ಪಕ್ಷ ಹುಟ್ಟಿಕೊಳ್ತಿದ್ರೆ….. ಇನ್ನು ಕೆಲವು ಪಕ್ಷಗಳು ನೋಡ ನೋಡ್ತಾನೇ ಮಂಗಮಾಯವಾಗಿ ಹೋಗಿರುತ್ತೆ. ಈಗ ಸದ್ಯಕ್ಕೆ ದೇಶದಲ್ಲಿ ಒಟ್ಟು 31 ಪ್ರಾದೇಶಿಕ ಪಕ್ಷಗಳು ಅಸ್ತಿತ್ವದಲ್ಲಿವೆ. ಈ 31 ಪ್ರಾದೇಶಿಕ ಪಕ್ಷಗಳಲ್ಲಿ ತಮಿಳುನಾಡಿನ ಡಿಎಂಕೆ ಪಕ್ಷ ಅತಿ ಹೆಚ್ಚು ಆದಾಯ ಗಳಿಸಿದ ಮತ್ತು ವ್ಯಯಿಸಿರೋ ಪಕ್ಷವಾಗಿದೆ ಅಂತ 2020-21ರ ಎಡಿಆರ್ ವರದಿ ವಿಶ್ಲೇಷಣೆಯಿಂದ ತಿಳಿದು ಬಂದಿದೆ.
ಪಕ್ಷಗಳು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆದಾಯ ಹೇಳಿಕೆ ವರದಿಯನ್ನು ಎಡಿಆರ್ ವಿಶ್ಲೇಷಣೆ ಮಾಡಿದೆ. 2021ರ ಅಕ್ಟೋಬರ್ 31, ಇಂಥ ವರದಿ ಸಲ್ಲಿಸಲು ಕೊನೆಯ ದಿನವಾಗಿತ್ತು. ಆದರೆ ಚುನಾವಣಾ ಆಯೋಗದ ವೆಬ್ ಸೈಟ್ಲ್ಲಿ ಮೇ 27ರಲ್ಲಿ 54 ಪ್ರಾದೇಶಿಕ ಪಕ್ಷಗಳಲ್ಲಿ 23 ಪಕ್ಷಗಳು ಆದಾಯ ವರದಿಗಳು ಕಂಡುಬಂದಿಲ್ಲ.
ರಾಷ್ಟ್ರೀಯ ಜನತಾದಳ, ಸಮಾಜವಾದಿ ಪಕ್ಷ ಮತ್ತು ಜಮ್ಮು ಕಾಶ್ಮೀರದ ನ್ಯಾಶನಲ್ ಕಾನ್ಫರೆನ್ಸ್ ಈ ಪಕ್ಷಗಳು ವಾರ್ಷಿಕ ಆದಾಯ ವರದಿ ಸಿಗದಿರುವ ಪರಿಣಾಮ ಡಿಎಂಕೆ ಅತಿಹೆಚ್ಚು ಆದಾಯ ಗಳಿಸೋ ಪಕ್ಷ ಅಂತ ಹೇಳಲಾಗಿದೆ.
ಮನೆಯ ಈ ಸ್ಥಳದಲ್ಲಿ ಹನುಮಂತನ ಫೋಟೋ ಇದ್ರೆ ಒಳಿತು
ಈಗಾಗಲೇ ಆದಾಯ ಘೋಷಣೆ ಮಾಡಿರುವ 31 ಪಕ್ಷಗಳ ಒಟ್ಟು ಆದಾಯವು 529.41 ಕೋಟಿ ರೂಪಾಯಿ ಇದ್ದು, ಅದರಲ್ಲಿ 149.95 ಕೋಟಿ ರೂಪಾಯಿ ಡಿಎಂಕೆ ಪಕ್ಷದ್ದಾಗಿದೆ. ಆಂಧ್ರದ ವೈಎಸ್ಆರ್ ಕಾಂಗ್ರೆಸ್ 107.99 ಕೋಟಿ ರೂಪಾಯಿ ಆದಾಯದೊಂದಿಗೆ ಎರಡನೇ ಸ್ಥಾನದಲ್ಲಿದೆ. ಇನ್ನೂ ಮೂರನೇ ಸ್ಥಾನದಲ್ಲಿ ಬಿಜು ಜನತಾದಳದ ಕಳೆದ ವರ್ಷ 73.34 ಕೋಟಿ ರೂಪಾಯಿ ಆದಾಯದ ಲೆಕ್ಕವನ್ನ ತೋರಿಸಿತ್ತು.
ಅದೇ ವೇಳೆ ಈ 31 ಪಕ್ಷಗಳು ಒಟ್ಟು 47.34% ಆದಾಯದ ಚುನಾವಣಾ ಬಾಂಡುಗಳು ಎಂದು ಹೇಳಿವೆ. 2019/20ರಲ್ಲಿ 7 ರಾಷ್ಟ್ರೀಯ ಪಕ್ಷಗಳ ಆದಾಯದ 62% ಚುನಾವಣಾ ಬಾಂಡುಗಳಿಂದ ಬಂದಿವೆ ಎಂದು ಘೋಷಿಸಿಕೊಂಡಿವೆ. ಒಟ್ಟಾರೆ ಹಣಕಾಸಿನ ಮಾಹಿತಿ ವರದಿಗಳು ಈಗೀಗ ಹೆಚ್ಚು ಪ್ರಗತಿಪರ ರೀತಿಯಲ್ಲಿ ಸಲ್ಲಿಸಲಾಗುತ್ತೆ ಎಂದು ಎಡಿಆರ್ ಹೇಳಿದೆ.