ಕೋಲಾರ: ಕೋಲಾರ ಜಿಲ್ಲೆಯ ಕಲ್ವಮಂಜಲಿ ಗ್ರಾಮದಲ್ಲಿ ಜಮೀನು ಉಳುಮೆ ಮಾಡುವ ವೇಳೆ ಟ್ಯಾಕ್ಟರ್ ರೋಟರ್ ಗೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಅವರ ದೇಹ ಛಿದ್ರವಾಗಿದೆ.
ಸೌಮ್ಯಾ(35) ಪಟ್ಟವರು ಎಂದು ಹೇಳಲಾಗಿದೆ. ಕಲ್ವಮಂಜಲಿ ಗ್ರಾಮದ ಜಮೀನಿನಲ್ಲಿ ಸೌಮ್ಯಾ ಅವರ ಪತಿ ರಾಜೇಶ್ ಟ್ರ್ಯಾಕ್ಟರ್ ಗೆ ರೋಟರ್ ಹಾಕಿಕೊಂಡು ಉಳುಮೆ ಮಾಡುವ ವೇಳೆ ಮೊಬೈಲ್ ಕೊಡಲು ಸೌಮ್ಯಾ ಸಮೀಪಕ್ಕೆ ಹೋಗಿದ್ದಾರೆ. ಸೀರೆಯ ಸೆರಗು ರೋಟರ್ ಗೆ ಸಿಲುಕಿ ಸೌಮ್ಯಾ ಅವರನ್ನು ಎಳೆದುಕೊಂಡಿದೆ. ಸೌಮ್ಯಾ ಅವರ ದೇಹ ರೋಟರ್ ನಲ್ಲಿ ಸಿಲುಕಿ ತುಂಡುತುಂಡಾಗಿದೆ. ರಾಜೇಶ್ ಟ್ರ್ಯಾಕ್ಟರ್ ನಿಲ್ಲಿಸಿ ಕೆಳಗೆ ಬರುವಷ್ಟರಲ್ಲಿ ರುಂಡ-ಮುಂಡ, ಕೈಕಾಲುಗಳು ಛಿದ್ರವಾಗಿ ಬಿದ್ದಿವೆ ಎಂದು ಹೇಳಲಾಗಿದೆ. ವೇಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.