ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಟೀಂ ಇಂಡಿಯಾ ಕ್ರಿಕೆಟ್‍ನ ನಾಯಕತ್ವದ ಬಾಗಿಲು ಬಡಿಯುತ್ತಿದ್ದಾರೆ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಹೇಳಿದ್ದಾರೆ.
ತನ್ನ ನಾಯಕತ್ವದ ಗುಣಗಳೊಂದಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ನಲ್ಲಿ ಹಾರ್ದಿಕ್ ಪಾಂಡ್ಯ ತನ್ನ ಛಾಪು ಮೂಡಿಸಿದ್ದಾರೆ. ನಾಯಕತ್ವಕ್ಕೆ ಪದಾರ್ಪಣೆ ಮಾಡುವ ಮೂಲಕ ಹಾರ್ದಿಕ್, ಜಿಟಿ ತಂಡವನ್ನು ಐಪಿಎಲ್ 2022 ರ ಫೈನಲ್‌ಗೆ ಚೊಚ್ಚಲ ಎಂಟ್ರಿ ಕೊಟ್ಟಿದ್ದಾರೆ.
ಭಾನುವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಜಿಟಿ ಜಯಭೇರಿ ಬಾರಿಸಿದೆ. ಹಾರ್ದಿಕ್ ನಾಯಕತ್ವದ ಗುಣಗಳ ಹೊರತಾಗಿ, ಈ ಋತುವಿನಲ್ಲಿ 14 ಪಂದ್ಯಗಳಲ್ಲಿ 453 ರನ್ಗಳೊಂದಿಗೆ 45.30 ರ ಸರಾಸರಿಯಲ್ಲಿ ಸ್ಟ್ರೈಕ್ ಮಾಡುವ ಮೂಲಕ ಅವರು ಜಿಟಿಯ ಪ್ರಮುಖ ರನ್-ಸ್ಕೋರರ್ ಆಗಿದ್ದಾರೆ.
ಹೀಗಾಗಿ ಹಾರ್ದಿಕ್ ಪಾಂಡ್ಯ ಅವರು ಭಾರತೀಯ ನಾಯಕತ್ವದ ಬಾಗಿಲು ಬಡಿಯುತ್ತಿದ್ದಾರೆ. ರೋಹಿತ್ ಶರ್ಮಾ ನಾಯಕನಾಗಿ ಎಷ್ಟು ದಿನ ಮುಂದುವರಿಯುತ್ತಾರೆ ಎಂಬುದು ಖಚಿತವಾಗಿಲ್ಲ ಎಂದು ಪಾಕ್ ಮಾಜಿ ವೇಗಿ ಹೇಳಿದ್ದಾರೆ.
ಅಂದಹಾಗೆ, ಹಾರ್ದಿಕ್ ತನ್ನ ಫಿಟ್‌ನೆಸ್ ಮತ್ತು ಬೌಲಿಂಗ್‌ನತ್ತ ಗಮನ ಹರಿಸಬೇಕಾಗಿದೆ ಎಂದು ಅಖ್ತರ್ ಹೇಳಿದ್ದಾರೆ. 28 ವರ್ಷದ ಆಟಗಾರನಿಗೆ ಕೇವಲ ಬ್ಯಾಟರ್ ಆಗಿ ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟಕರವಾಗಿದೆ ಎಂದು ಹೇಳಿದ್ದಾರೆ.
ಭಾರತ ಕ್ರಿಕೆಟ್ ತಂಡದ ನಾಯಕನಾಗುವುದು ಎಂದಿಗೂ ಸುಲಭವಲ್ಲ. ಹಾರ್ದಿಕ್ ತಮ್ಮ ನಾಯಕತ್ವವನ್ನು ಸಾಬೀತುಪಡಿಸಿದ್ದಾರೆ. ಆದರೆ, ಅವರು ಇನ್ನೂ ತಮ್ಮ ಫಿಟ್ನೆಸ್ ಮತ್ತು ಬೌಲಿಂಗ್ ಮೇಲೆ ಗಮನ ಹರಿಸಬೇಕಾಗಿದೆ ಎಂದಿದ್ದಾರೆ.