alex Certify ನಾಲ್ಕು ಕೈ, ಕಾಲುಗಳೊಂದಿಗೆ ಜನಿಸಿದ ಕಂದಮ್ಮನ ಶಸ್ತ್ರಚಿಕಿತ್ಸೆಗೆ ನಟ ಸೋನು ಸೂದ್ ಸಹಾಯಹಸ್ತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಲ್ಕು ಕೈ, ಕಾಲುಗಳೊಂದಿಗೆ ಜನಿಸಿದ ಕಂದಮ್ಮನ ಶಸ್ತ್ರಚಿಕಿತ್ಸೆಗೆ ನಟ ಸೋನು ಸೂದ್ ಸಹಾಯಹಸ್ತ

 ಬಿಹಾರದಲ್ಲಿ ನಾಲ್ಕು ಕೈ ಮತ್ತು ಕಾಲುಗಳೊಂದಿಗೆ ಹೆಣ್ಣು ಮಗು ಜನಿಸಿರುವ ಬಗ್ಗೆ ನೀವು ಕೇಳಿರಬಹುದು. ನವಾಡ ಜಿಲ್ಲೆಯಲ್ಲಿ ಜನಿಸಿದ ಮಗು ಚೇತರಿಸಿಕೊಳ್ಳಲು ಮತ್ತು ಆರೋಗ್ಯಕರ ಜೀವನ ನಡೆಸಲು ತಕ್ಷಣದ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಇದೀಗ ನಟ ಸೋನು ಸೂದ್ ಮುಂದೆ ಬಂದು ಮಗುವಿಗೆ ನೆರವು ನೀಡಿದ್ದಾರೆ.

ಸೋನು ಸೂದ್ ಟ್ವಿಟ್ಟರ್‌ನಲ್ಲಿ ಪುಟ್ಟ ಬಾಲೆಯ ಶಸ್ತ್ರಚಿಕಿತ್ಸೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಯಾರೂ ಕೂಡ ಟೆನ್ಷನ್ ಮಾಡಿಕೊಳ್ಳಬೇಡಿ, ಚಿಕಿತ್ಸೆ ಆರಂಭಿಸಲಾಗಿದೆ. ಬಾಲಕಿಗಾಗಿ ಪ್ರಾರ್ಥಿಸಿ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.

ನಟ ಸೋನು ಸೂದ್ ಅವರು ತಮ್ಮ ಪರೋಪಕಾರಿ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಹಲವಾರು ಜನರಿಗೆ ಮೂಲ ಸೌಕರ್ಯಗಳು ಮತ್ತು ವೈದ್ಯಕೀಯ ವೆಚ್ಚಕ್ಕಾಗಿ ಹಣವನ್ನು ಒದಗಿಸುವ ಮೂಲಕ ಹಲವರ ಬಾಳಿನಲ್ಲಿ ಬೆಳಕಾಗಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...