ಮಡಿಕೇರಿ: ಕೋಟೆಅಬ್ಬಿ ಜಲಪಾತದಲ್ಲಿ ಮೂವರು ನೀರುಪಾಲಾಗಿದ್ದಾರೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಕೋಟೆಅಬ್ಬಿ ಫಾಲ್ಸ್ ನಲ್ಲಿ ತೆಲಂಗಾಣದಿಂದ ಪ್ರವಾಸಕ್ಕೆ ಬಂದಿದ್ದ ಮೂವರು ನೀರುಪಾಲಾಗಿದ್ದಾರೆ.
ಶಾಮ(36), ಶಹೀಂದ್ರ(16), ಶ್ರೀಹರ್ಷ(18) ನೀರುಪಾಲಾದವರು ಎಂದು ಹೇಳಲಾಗಿದೆ. ಕೋಟೆಅಬ್ಬಿ ಜಲಪಾತದಲ್ಲಿ ಸ್ನಾನಕ್ಕೆಂದು ದುರ್ಘಟನೆ ಸಂಭವಿಸಿದೆ. ಸೋಮವಾರಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.