ದೇಶದಲ್ಲಿ ಕೋಮು ಭಾವನೆಯನ್ನು ಕೆರಳಿಸುವಂತಹ ಹೇಳಿಕೆಗಳನ್ನು ನೀಡುವ ರಾಜಕಾರಣಿಗಳಿಗೆ ಸದ್ಯದ ಮಟ್ಟಿಗೆ ಬ್ರೇಕ್ ಬೀಳುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ.
ವಿವಿಧ ಪಕ್ಷಗಳ ನಾಯಕರು ಎನಿಸಿಕೊಂಡವರು ತಮ್ಮ ನಾಲಗೆಯನ್ನು ಹರಿಬಿಡುವ ಮೂಲಕ ಸಮಾಜದ ಸ್ವಾಸ್ಥ್ಯ ಕೆಡಿಸಲು ಮುಂದಾಗುತ್ತಾರೆ. ಇಂತವರ ಸಾಲಿಗೆ ಕೇರಳದ ಪಾಪ್ಯುಲರ್ ಫ್ರಂಟ್ ನಾಯಕ ಯಾಹ್ಯ ತಂಗಲ್ ಸೇರ್ಪಡೆಯಾಗಿದ್ದಾರೆ.
ಈತ ನ್ಯಾಯಾಲಯಗಳ ನ್ಯಾಯಾಧೀಶರ ಬಗ್ಗೆಯೇ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಅಲಪ್ಪೂಝಾದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಈತ, ಕೇರಳ ಹೈಕೋರ್ಟಿನ ನ್ಯಾಯಾಧೀಶರು ಹಾಕುವ `ಒಳ ಉಡುಪು ಕೇಸರಿ’ ಬಣ್ಣದ್ದಾಗಿದೆ ಎಂದು ಹೇಳಿದ್ದಾರೆ.
ಇಲ್ಲಿ ನಡೆಯುತ್ತಿರುವ ರ್ಯಾಲಿಯಲ್ಲಿನ ಘೋಷಣೆ ಕೇಳಿದರೆ ಹೈಕೋರ್ಟ್ ನ್ಯಾಯಾಧೀಶರಿಗೆ ಶಾಕ್ ಆಗುತ್ತದೆ. ಇದಕ್ಕೆ ಕಾರಣವೇನು ಗೊತ್ತೇ? ಏಕೆಂದರೆ, ಅವರು (ನ್ಯಾಯಾಧೀಶರು) ಧರಿಸುವ ಒಳ ಉಡುಪುಗಳು ಕೇಸರಿ ಎಂದು ವ್ಯಂಗ್ಯವಾಡಿದ್ದಾರೆ.
ಮದುವೆ ಮೆರವಣಿಗೆಯಲ್ಲಿ ಕುದುರೆ, ಡಿಜೆ ಬಳಸಿದ್ದಕ್ಕೆ ಮೇಲ್ವರ್ಗದವರ ದಬ್ಬಾಳಿಕೆ: ಘರ್ಷಣೆಯಲ್ಲಿ ಪೊಲೀಸರೂ ಸೇರಿ ಹಲವರಿಗೆ ಗಾಯ
ಈ ಕಾರಣದಿಂದಲೇ ನ್ಯಾಯಾಧೀಶರು ನಮ್ಮ ವಿರುದ್ಧ ಬಹುಬೇಗನೇ ಕೋಪಗೊಳ್ಳುತ್ತಾರೆ. ಈ ನಮ್ಮ ಹೇಳಿಕೆಗಳನ್ನು ಅವರಿಗೆ ತಡೆದುಕೊಳ್ಳಲಾಗುವುದಿಲ್ಲ ಮತ್ತು ಅವರು ಗಲಿಬಿಲಿಗೊಳ್ಳುತ್ತಾರೆ ಎಂದಿದ್ದಾರೆ.