ಬ್ಲೂಲರ್ನ್‌ನ ಸಹ ಸಂಸ್ಥಾಪಕ ಹರೀಶ್ ಉದಯಕುಮಾರ್ ಇತ್ತೀಚೆಗೆ ಫೋರ್ಬ್ಸ್ 30 ಅಂಡರ್ 30 ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಚ್ಚರಿ ಎಂದರೆ ಈ ಸಾಧನೆಗೆ ಅವರ ತಂದೆಯ ರಿಪ್ಲೇ ಗಮನಾರ್ಹವಾದದ್ದು.
ಫೋರ್ಬ್ಸ್ ಪಟ್ಟಿಯಲ್ಲಿ ಹೆಸರು ಬಂದಿರುವ ಬಗ್ಗೆ ಅವರು ತಂದೆಗೆ ತಿಳಿಸಿದಾಗ, ಅತ್ತ ಕಡೆಯಿಂದ ಕೇವಲ ಎಮೋಜಿಯ ಪ್ರತಿಕ್ರಿಯೆ ಬಂದಿದೆ. ಈ ಸಂಗತಿ ಉದಯ್ ಕುಮಾರ್ ಹಂಚಿಕೊಂಡಿದ್ದು, ತಮಗೇನು ಈ ಬಗ್ಗೆ ಬೇಸರವಿಲ್ಲ ಎಂದಿದ್ದಾರೆ.
ತಂದೆಯು ಊಟ ಆಯಿತೇ ಎಂದು ವಿಚಾರಿಸಿದ್ದಾರೆ. ಇನ್ನೂ ಸಮಯವಿಲ್ಲ ಎಂದು ಉತ್ತರಿಸುವಾಗ, ಫೋಬ್ಸ್ ’30 ಅಂಡರ್ 30′ ನ ಅಪೇಕ್ಷಿತ ಪಟ್ಟಿಯಲ್ಲಿ ಸೇರಿಸಿರುವುದಾಗಿ ಉದಯ್ ತಿಳಿಸಿದರು.
ಈ ವಿಷಯ ತಿಳಿದು ಹೆಚ್ಚಿನವರು ಸಂತೋಷದಿಂದ ಹಾರಾಡಿರಬಹುದು ಅಥವಾ ಹೊಗಳಿಕೆಗಳ ಸುರಿಮಳೆಗೈದಿರಬಹುದು. ಆದರೆ ಉದಯಕುಮಾರ್ ತಂದೆ ಕೇವಲ ಥಂಬ್ಸ್ ಅಪ್ ಎಮೋಜಿಯೊಂದಿಗೆ ಉತ್ತರಿಸಿದ್ದಾರೆ.
ಈ ಚರ್ಚೆಯ ಸ್ಕ್ರೀನ್ ಶಾಟ್‌ಅನ್ನು ಉದಯಕುಮಾರ್ ಹಂಚಿಕೊಂಡಿದ್ದಾರೆ. ಇದನ್ನು ಗಮನಿಸಿದ ನೆಟ್ಟಿಗರು ಬಗೆಬಗೆಯ ಪ್ರತಿಕ್ರಿಯೆ ನೀಡಿ ಖುಷಿಪಟ್ಟಿದ್ದಾರೆ.
https://twitter.com/curiousharish/status/1530058718808657920?ref_src=twsrc%5Etfw