ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನರಿಗೆ ಜೂನ್ 1 ರಿಂದ ಮತ್ತೊಂದು ಶಾಕ್ ಕಾದಿದೆ. ಬ್ಯಾಂಕ್ ಶುಲ್ಕದಿಂದ ಹಿಡಿದು ಎಲ್ ಪಿ ಜಿ, ವಿವಿಧ ಸೇವೆಗಳ ಶುಲ್ಕಹೆಚ್ಚಾಗುವುದು.
ಬ್ಯಾಂಕ್ ಮತ್ತು ವಿಮಾ ದರಗಳು, ಎಲ್‌ಪಿಜಿ ಸಿಲಿಂಡರ್ ಬೆಲೆ ಮತ್ತು ಎಟಿಎಫ್ ಇಂಧನ ಬೆಲೆಗಳಲ್ಲಿನ ಪರಿಷ್ಕರಣೆಗಳು ಪ್ರಮುಖವಾಗಿ ಸೇರಿವೆ. ಅವು ಸಾಮಾನ್ಯರ ಜೇಬಿನ ಮೇಲೆ ನೇರ ಪರಿಣಾಮ ಬೀರುತ್ತವೆ.
ಜೂನ್ 1 ರಿಂದ ಅನ್ವಯವಾಗುವಂತೆ ಗೃಹ ಸಾಲದ ಮೇಲಿನ ಎಸ್.ಬಿ.ಐ.ನ ಬಾಹ್ಯ ಮಾನದಂಡ ಸಾಲದ ದರ (ಇಬಿಎಲ್‌ಆರ್) ಹೆಚ್ಚಿಗೆಯಾಗುತ್ತದೆ. ರೆಪೊ ಲಿಂಕ್ಡ್ ಲೆಂಡಿಂಗ್ ದರ (ಆರ್‌ಎಲ್‌ಎಲ್‌ಆರ್) ಪರಿಷ್ಕರಣೆಯಾಗುವುದು.
ಜೂನ್ 1 ರಿಂದ ಕಾರುಗಳು ಮತ್ತು ಬೈಕ್‌ಗಳು ಸಹ ದುಬಾರಿಯಾಗಲಿವೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ವಿವಿಧ ವರ್ಗದ ವಾಹನಗಳಿಗೆ ಥರ್ಡ್- ಪಾರ್ಟಿ ಮೋಟಾರು ವಿಮಾ ಪ್ರೀಮಿಯಂ ಅನ್ನು ಹೆಚ್ಚಿಸಲು ಸಿದ್ಧವಾಗಿವೆ.
ಏರುತ್ತಿರುವ ಕಚ್ಚಾ ತೈಲ ಬೆಲೆ ಮತ್ತು ಹಣದುಬ್ಬರದ ಕಾರಣ ಅನಿಲ ಕಂಪನಿಗಳು ಮುಂದಿನ ತಿಂಗಳು ಮತ್ತೆ ಎಲ್.ಪಿ.ಜಿ. ದರ ಹೆಚ್ಚಿಸುವ ಸಾಧ್ಯತೆಯಿದೆ. ಗೃಹ ಬಳಕೆ ಎಲ್.ಪಿ.ಜಿ. ಬೆಲೆ ಇತ್ತೀಚೆಗೆ ಹೆಚ್ಚಿಸಲಾಗಿದ್ದರೂ, ಮುಂಬರುವ ತಿಂಗಳಲ್ಲಿ ಅದು ಸಹ ಹೆಚ್ಚಾಗುವ ಸಾಧ್ಯತೆಯಿದೆ.
ಮುಂದಿನ ತಿಂಗಳಿನಿಂದ ಎಟಿಎಫ್ ಅಥವಾ ಜೆಟ್ ಇಂಧನ ಬೆಲೆಯೂ ಏರಿಕೆಯಾಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ, ಎಟಿಎಫ್ ಬೆಲೆಗಳನ್ನು ಪ್ರತಿ ತಿಂಗಳ 1 ಮತ್ತು 16 ರಂದು ಹೆಚ್ಚಿಸಲಾಗುತ್ತದೆ. ಹೀಗಾಗಿ ಜೂನ್ 1ರಿಂದ ಏರಿಕೆಯಾಗುವ ನಿರೀಕ್ಷೆ ಇದೆ.