ಬೆಳ್ಳಂಬೆಳಗ್ಗೆ ಕಾಫಿಗಾಗಿ ಹಾಲು ಖರೀದಿಸಲು ಹೋದ ವ್ಯಕ್ತಿಯೊಬ್ಬನಿಗೆ ಬಂಪರ್ ಲಾಟರಿ ದೊರೆತಿದೆ. ಅಯ್ಯೋ.. ಹಾಲು ತರಬೇಕೆ ಅಂತಾ ಸೋಂಬೇರಿ ತನದಿಂದ ಹೋದವನ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.
ಹೌದು, ದಕ್ಷಿಣ ಕೆರೊಲಿನಾದ ವ್ಯಕ್ತಿಯೊಬ್ಬನಿಗೆ ಡಾಲರ್ 2 ಮಿಲಿಯನ್ ಅಂದರೆ ಸರಿಸುಮಾರು 15.5 ಕೋಟಿ ರೂ. ಬಂಪರ್ ಲಾಟರಿಯನ್ನು ತನ್ನದಾಗಿಸಿಕೊಂಡಿದ್ದಾನೆ. ಅದೃಷ್ಟಶಾಲಿ ವಿಜೇತ ವ್ಯಕ್ತಿಯು, ಹಾಲು ಖರೀದಿಸಲು ಅಂಗಡಿಗೆ ಹೋಗಿದ್ದಾರೆ. ಆತ ಅಂಗಡಿ ತಲುಪುತ್ತಿದ್ದಂತೆ ಗ್ರಾಹಕ ಸೇವಾ ಕೌಂಟರ್‌ನಲ್ಲಿದ್ದ ಪವರ್‌ಬಾಲ್ ಟಿಕೆಟ್ ಗಮನ ಸೆಳೆದಿದೆ. ಹೀಗಾಗಿ ಹಾಲಿನ ಜೊತೆಗೆ ಲಾಟರಿ ಟಿಕೆಟ್ ಕೂಡ ಖರೀದಿಸಿದ್ದಾರೆ.
ಮರುದಿನ, ಅದೃಷ್ಟದ ಸಂಖ್ಯೆಗಳನ್ನು ಡ್ರಾ ಮಾಡುವಾಗ ಆತ ಖರೀದಿಸಿದ್ದ ಲಾಟರಿ ಟಿಕೆಟ್‍ನ ಎಲ್ಲಾ ಐದು ಸಂಖ್ಯೆಗಳು ಹೊಂದಿಕೆಯಾಗಿದೆ. ಮಿಲಿಯನೇರ್ ಆಗುತ್ತಿದ್ದಂತೆ ಆತನ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಖುಷಿಯಿಂದ ಹುಚ್ಚನಂತಾಗಿದ್ದೆ ಎಂದು ಹೇಳಿದ್ದಾರೆ.
ಇದೇ ರೀತಿ ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್‌ನ ಮಹಿಳೆಯೊಬ್ಬರು ಸಹ ಆಕಸ್ಮಿಕವಾಗಿ ಮಿಲಿಯನೇರ್ ಆಗಿದ್ದಾರೆ. ಟಿಕೆಟ್ ಖರೀದಿಸಿದ್ದ ಮಹಿಳೆಯೊಬ್ಬರು ಬಂಪರ್ ಬಹುಮಾನ ಪಡೆದಿದ್ದು, ಡಾಲರ್ 10 ಮಿಲಿಯನ್, ಅಂದರೆ ಸುಮಾರು 75 ಕೋಟಿ ರೂ. ಮೊತ್ತವನ್ನು ತನ್ನದಾಗಿಸಿಕೊಂಡಿದ್ದಾರೆ.