ನೀವು ಭಾರತದ ಯಾವುದೇ ಭಾಗಕ್ಕೆ ಹೋದರೂ ಪ್ರತಿ ಮನೆಯಲ್ಲೂ ಉಪ್ಪಿನಕಾಯಿ ಇದ್ದೇ ಇರುತ್ತದೆ. ಯಾಕಂದ್ರೆ ಈ ದೇಶದಲ್ಲಿ ಉಪ್ಪಿನಕಾಯಿ ಪ್ರಿಯರಿಗೆ ಕೊರತೆಯಿಲ್ಲ. ಉಪ್ಪಿನಕಾಯಿ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಅನೇಕ ಬಾರಿ ನಮಗೆ ಇಷ್ಟವಾಗದ ತರಕಾರಿಯ ಮೇಲೋಗರಗಳನ್ನು ಮನೆಯಲ್ಲಿ ತಯಾರಿಸಲಾಗುತ್ತದೆ. ಅಂತಹ ಸಂದರ್ಭಗಳಲ್ಲೆಲ್ಲ ಉಪ್ಪಿನಕಾಯಿಯನ್ನು ಆಶ್ರಯಿಸಬೇಕಾಗುತ್ತದೆ.
ಆದರೆ ಉಪ್ಪಿನಕಾಯಿಯಲ್ಲಿರುವ ಹುಳಿ ಅಂಶ ಯುವಕರು ಮತ್ತು ವಿವಾಹಿತ ಪುರುಷರಿಗೆ ಹಾನಿಕಾರಕ ಅನ್ನೋದು ನಿಮಗೆ ಗೊತ್ತಿದೆಯೇ? ಉಪ್ಪಿನಕಾಯಿಯಲ್ಲಿ ಮಸಾಲೆ ಪದಾರ್ಥಗಳು ಸಾಕಷ್ಟಿರುತ್ತವೆ. ಜೊತೆಗೆ ಅದರ ತಯಾರಿಕೆಯಲ್ಲಿ ಬಹಳಷ್ಟು ಎಣ್ಣೆಯನ್ನು ಬಳಸಲಾಗುತ್ತದೆ. ಅಲ್ಲದೆ, ಸೂರ್ಯನ ಬೆಳಕಿಗೆ ಸರಿಯಾಗಿ ತೆರೆದುಕೊಳ್ಳದಿದ್ದರೆ, ಅದರಲ್ಲಿ ಬಳಸುವ ಮಸಾಲೆಗಳು ಸಹ ಹಸಿಯಾಗಿಯೇ ಉಳಿಯುತ್ತವೆ. ಈ 2 ಕಾರಣಗಳಿಂದಾಗಿ ಅಧಿಕ ಕೊಲೆಸ್ಟ್ರಾಲ್ ಮತ್ತು ಜೀರ್ಣಕ್ರಿಯೆಯ ಸಮಸ್ಯೆಯಾಗಬಹುದು. ಇದು ಪುರುಷರ ಲೈಂಗಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಯಾವುದನ್ನಾದರೂ ಅತಿಯಾಗಿ ತಿನ್ನುವುದು ಹಾನಿಕಾರಕ. ವಿವಾಹಿತ ಪುರುಷರು ಉಪ್ಪಿನಕಾಯಿಯನ್ನು ಹೆಚ್ಚು ಸೇವಿಸಿದರೆ ಅದರ ಹುಳಿ ಅಂಶ ಪುರುಷ ಫಲವತ್ತತೆಯ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ನಿಮ್ಮ ವೈವಾಹಿಕ ಜೀವನದ ಆನಂದಕ್ಕೆ ಧಕ್ಕೆಯಾಗಬಹುದು. ತಂದೆಯಾಗುವಲ್ಲಿಯೂ ಸಮಸ್ಯೆಗಳು ಎದುರಾಗಬಹುದು. ಈ ಸಮಸ್ಯೆಗಳನ್ನು ತಪ್ಪಿಸಲು ನೀವು ಉಪ್ಪಿನಕಾಯಿಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು.
ಸಾಧ್ಯವಾದರೆ ಮನೆಯಲ್ಲೇ ಉಪ್ಪಿನಕಾಯಿ ತಯಾರಿಸಿ. ಕಡಿಮೆ ಎಣ್ಣೆ ಮತ್ತು ಕಡಿಮೆ ಮಸಾಲೆಗಳನ್ನು ಬಳಸಿ ಗಾಜಿನ ಪಾತ್ರೆಯಲ್ಲಿ ಸಂಗ್ರಹಿಸಿಡಿ. ಈ ಉಪ್ಪಿನಕಾಯಿಯನ್ನು ನೀವು ಸೂರ್ಯನ ಬೆಳಕಿಗೆ ಒಡ್ಡಬೇಕು. ಮಾರುಕಟ್ಟೆಯಿಂದ ನೀವು ಕೊಂಡು ತರುವ ಉಪ್ಪಿನಕಾಯಿ ಸ್ವಚ್ಛವಾಗಿರುವುದಿಲ್ಲ. ಹಾಗಾಗಿ ಮನೆಯಲ್ಲೇ ತಯಾರಿಸಿಕೊಂಡು ಮಿತವಾಗಿ ಸೇವಿಸಿ.