ಸೈಪ್ರಸ್ನ ಲಾರ್ನಾಕಾಗೆ ಹೋಗುತ್ತಿದ್ದ ವಿಮಾನವು ಏಳು ಗಂಟೆಗಳ ಕಾಲ ವಿಳಂಬವಾಗಿರುವ ಘಟನೆ ನಡೆದಿದೆ. ಸಾಮಾನ್ಯವಾಗಿ, ಇದರಿಂದ ಪ್ರಯಾಣಿಕರು ಉದ್ರೇಕಗೊಳ್ಳುತ್ತಾರೆ ಮತ್ತು ಹತಾಶರಾಗುತ್ತಾರೆ ಅಂತಾ ನೀವು ಊಹಿಸಬಹುದು. ಆದರೆ, ಈ ಸಮಯದಲ್ಲಿ ವಿಮಾನದ ಪೈಲಟ್ ತನ್ನ ಶಾಂತತೆಯನ್ನು ಕಳೆದುಕೊಂಡಿದ್ದಲ್ಲದೆ, ವಿಳಂಬದ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.
ವಿಝ್ ಏರ್ ವಿಮಾನವು ಗ್ಯಾಟ್ವಿಕ್ ವಿಮಾನ ನಿಲ್ದಾಣದ ರನ್ವೇಯಲ್ಲಿ ಏಳು ಗಂಟೆಗಳ ಕಾಲ ಸಿಲುಕಿಕೊಂಡಿದೆ. ಪೈಲಟ್ನ ಪ್ರತಿಕ್ರಿಯೆಯನ್ನು ಪ್ರಯಾಣಿಕರೊಬ್ಬರು ರೆಕಾರ್ಡ್ ಮಾಡಿದ್ದಾರೆ. ಪೈಲಟ್ ನ ಉದ್ಧಟತನದ ಮಾತು ಕೇಳಿ ನೆಟ್ಟಿಗರು ಕೂಡ ಅಚ್ಚರಿಗೊಂಡಿದ್ದಾರೆ.
ವಿಮಾನದಿಂದ ಯಾರು ಇಳಿಯಲು ಬಯಸುವವರು ಕೈಯನ್ನು ಮೇಲಕ್ಕೆತ್ತಿ ಎಂದು ಪ್ರಯಾಣಿಕರಲ್ಲಿ ಪೈಲಟ್ ಕೇಳಿದ್ದಾರೆ. ನೀವು ಇಳಿದರೆ ನಾವು ಇಂದು ರಾತ್ರಿ ಹೋಗುವುದಿಲ್ಲ. ತನಗೆ, ಸಿಬ್ಬಂದಿಗೆ ಇದು ಅಗತ್ಯವಿಲ್ಲ. ಅಲ್ಲದೇ ವಿಮಾನ ತನ್ನ ನಿಯಂತ್ರಣದಲ್ಲಿಲ್ಲ. ಸಂಪೂರ್ಣವಾಗಿ ತನ್ನ ನಿಯಂತ್ರಣದಿಂದ ಹೊರಗಿದೆ. ಪೈಲಟ್ ಈ ರೀತಿ ಉದ್ಧಟತನ ತೋರುತ್ತಿರುವುದು ಪ್ರಯಾಣಿಕರಿಗೆ ನಂಬಲಾಗಲಿಲ್ಲ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ವಿಮಾನವು ಏಳು ಗಂಟೆಗಳ ಕಾಲ ರನ್ವೇಯಲ್ಲಿಯೇ ಉಳಿದುಕೊಂಡಿರುವ ಬಗ್ಗೆ ಪೈಲಟ್ಗೆ ನೆಟ್ಟಿಗರು ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.
ಇನ್ನು ಗ್ಯಾಟ್ವಿಕ್ನಿಂದ ಲಾರ್ನಾಕಾಗೆ ವಿಳಂಬವಾದ ವಿಮಾನ ಡಬ್ಲ್ಯೂ95749 ನಿಂದ ಉಂಟಾದ ಅನಾನುಕೂಲತೆಗಾಗಿ ವಿಜ್ ಏರ್ ಪ್ರಯಾಣಿಕರಲ್ಲಿ ಕ್ಷಮೆ ಯಾಚಿಸಿದೆ. ಏರ್ ಟ್ರಾಫಿಕ್ ಕಂಟ್ರೋಲ್ ದೋಷದಿಂದಾಗಿ ವಿಳಂಬವಾಗಿದೆ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.