ನವದೆಹಲಿ: ಇತ್ತೀಚೆಗೆ ಸೀಮಾ ಎಂಬ ವಿಶೇಷ ಸಾಮರ್ಥ್ಯವುಳ್ಳ ಬಿಹಾರದ ಹುಡುಗಿಯ ವಿಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿ ಜನರ ಹೃದಯವನ್ನು ಗೆದ್ದಿದ್ದು ನಿಮಗೆ ನೆನಪಿದೆಯೇ? ಅವಳು ಒಂದೇ ಕಾಲಿನಲ್ಲಿ ಶಾಲೆಗೆ ಹೋಗುತ್ತಿರುವ ದೃಶ್ಯ ಆ ವಿಡಿಯೋದಲ್ಲಿತ್ತು. ಅಲ್ಲದೆ, 10 ವರ್ಷದ ಮಗುವಿನ ಕಲಿಕೆಯ ತುಡಿತ, ಪರಿಶ್ರಮ, ಸಮರ್ಪಣಾ ಭಾವ ಅಲ್ಲಿ ವ್ಯಕ್ತವಾಗಿತ್ತು.
ಈ ವಿಡಿಯೋ ಬಾಲಿವುಡ್ ನಟ ಸೋನು ಸೂದ್ ಅವರ ಗಮನ ಸೆಳೆಯಿತು. ಸೀಮಾಗೆ ಈಗ ಕೃತಕ ಕಾಲು ಸಿಕ್ಕಿದೆ. ಈ ಕೃತಕ ಕಾಲು ಅಳವಡಿಸಿಕೊಂಡು ಸೀಮಾ ನಡೆಯುತ್ತಿರುವ ಫೋಟೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ವೈರಲ್ ಆಗಿದೆ.
ಇದೇ ಫೋಟೋವನ್ನು ಛತ್ತೀಸ್‌ಗಢ ಕೇಡರ್‌ನ 2009ರ ಬ್ಯಾಚಿನ ಐಎಎಸ್ ಅಧಿಕಾರಿ ಅವನೀಶ್ ಶರಣ್, “ಸೋಷಿಯಲ್ ಮೀಡಿಯಾದ ತಾಕತ್ತುʼʼ ಎಂಬ ಶೀರ್ಷಿಕೆ ಅಡಿ ಶೇರ್ ಮಾಡಿದ್ದರು. ಸೀಮಾ ತನ್ನ ಪ್ರಾಸ್ಥೆಟಿಕ್ ಕಾಲು ಅಳವಡಿಸಿಕೊಂಡು ಶಾಲಾ ಸಮವಸ್ತ್ರ ಧರಿಸಿರುವ ಚಿತ್ರವನ್ನು ಶರಣ್ ಹಂಚಿಕೊಂಡಿದ್ದಾರೆ.
BIG NEWS: ಕನ್ನಡಿಗರನ್ನು ಕೆಣಕಿದರೆ ಸರ್ಕಾರ ಸಹಿಸಲ್ಲ; MES ಪುಂಡರಿಗೆ ಸಿಎಂ ಬೊಮ್ಮಾಯಿ ಎಚ್ಚರಿಕೆ
ಎರಡು ವರ್ಷಗಳ ಹಿಂದೆ ದುರದೃಷ್ಟಕರ ಅಪಘಾತದ ನಂತರ, ಸೀಮಾ ಅವರ ಕಾಲನ್ನು ಕತ್ತರಿಸಬೇಕಾಯಿತು. ಆದರೆ ಆಕೆಯ ಧೈರ್ಯ ಮತ್ತು ಜೀವನದ ಬಗೆಗಿನ ಉತ್ಸಾಹ ಬದುಕಿನಲ್ಲಿ ಗೆಲ್ಲಬೇಕೆಂಬ ಛಲ ಮೂಡಿಸಿತು. ಸೋನು ಸೂದ್ ಕೂಡ ಈ ಕುರಿತ ವಿಡಿಯೊವನ್ನು ಶೇರ್ ಮಾಡಿದ್ದು, “ಈಗ ಅವಳು ಶಾಲೆಗೆ ಹೋಗುವುದು ಕೇವಲ ಒಂದು ಕಾಲಲ್ಲ. ಎರಡು ಕಾಲಿನಲ್ಲೇ ಆಕೆ ಶಾಲೆಗೆ ಹೋಗುತ್ತಾಳೆ. ನಾನು ಟಿಕೆಟ್ ಕಳುಹಿಸುತ್ತಿದ್ದೇನೆ” ಎಂದು ಹೇಳಿಕೊಂಡಿದ್ದರು.
ಈ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗಿದ್ದು, ಸಾಮಾಜಿಕ ತಾಣಗಳಲ್ಲಿ ವಿವಿಧ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅನೇಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಆಕೆಗೆ ಧೈರ್ಯ ತುಂಬುವ ಮಾತುಗಳನ್ನು ಹೇಳಿದ್ದಾರೆ.
https://twitter.com/VinaySinghUSA/status/1530178676591058946?ref_src=twsrc%5Etfw%7Ctwcamp%5Etweetembed%7Ctwterm%5E1530178676591058946%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fspecially-abled-bihar-girl-who-hopped-her-way-to-school-gets-prosthetic-leg-ias-officer-shares-pic-1955129-2022-05-27