ಮೈಸೂರು: ಪೊಲೀಸ್ ಕಾನ್ಸ್ ಟೇಬಲ್ ಓರ್ವರು ಜಲಪುರಿ ಪೊಲೀಸ್ ಕ್ವಾಟ್ರಸ್ ನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
27 ವರ್ಷದ ಪರಸಪ್ಪ ಕೊನ್ನೂರು ಮೃತ ಪೊಲೀಸ್ ಪೇದೆ. ಉತ್ತರ ಕರ್ನಾಟಕ ಮೂಲದವರಾಗಿದ್ದ ಪರಸಪ್ಪ ಮೈಸೂರಿನ ದೇವರಾಜ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಒಂದಲ್ಲ, ಎರಡಲ್ಲ 40 ಐಷಾರಾಮಿ ಕಾರು ಕಳವು ಮಾಡಿದ ಮೂವರು ಅಂದರ್
ಪತ್ನಿ ವಾಯುವಿಹಾರಕ್ಕೆ ತೆರಳಿದ್ದ ವೇಳೆ ಪರಸಪ್ಪ ಪೊಲೀಸ್ ಕ್ವಾಟ್ರಸ್ ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದುವರೆ ವರ್ಷದ ಹಿಂದಷ್ಟೇ ಪರಸಪ್ಪ ಕೊನ್ನೂರು ವಿವಾಹವಾಗಿದ್ದರು. ನಜಾರ್ ಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.