ಬೆಂಗಳೂರು: ರೈತರ ಖಾತೆಗೆ ನೇರವಾಗಿ ರಸಗೊಬ್ಬರ ಸಬ್ಸಿಡಿ ಜಮಾ ಮಾಡಬೇಕು ಎಂದು ಭಾರತೀಯ ಕಿಸಾನ್ ಸಂಘ ಒತ್ತಾಯಿಸಿದೆ.
ರಸಗೊಬ್ಬರದ ಸಬ್ಸಿಡಿ ನೀಡುವುದರಿಂದ ರೈತರು ಕಡಿಮೆ ಬೆಲೆಯಲ್ಲಿ ಗೊಬ್ಬರ ಸಿಗುತ್ತದೆ ಎಂದು ಖರೀದಿಸಿ ಹೆಚ್ಚಿನ ಪ್ರಮಾಣದಲ್ಲಿ ರಸಗೊಬ್ಬರ ಬಳಸಲು ಆರಂಭಿಸುತ್ತಾರೆ. ಇದರಿಂದ ಕಾರ್ಪೊರೇಟ್ ಕಂಪನಿಗಳಿಗೆ ಲಾಭವಾಗುತ್ತದೆ. ರೈತರಿಗೆ, ಭೂಮಿಗೆ ಇದರಿಂದ ಲಾಭವಾಗುವುದಿಲ್ಲ. ಹೀಗಾಗಿ ರೈತರ ಖಾತೆಗೆ ನೇರವಾಗಿ ರಸಗೊಬ್ಬರ ಸಬ್ಸಿಡಿ ಜಮಾ ಮಾಡಬೇಕು ಎಂದು ಭಾರತೀಯ ಕಿಸಾನ್ ಸಂಘದ ಕರ್ನಾಟಕ ಪ್ರದೇಶ ದಕ್ಷಿಣ ಪ್ರಾಂತ ಕಾರ್ಯದರ್ಶಿ ಹಾಡ್ಯ ರಮೇಶ್ ರಾಜು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರಸಗೊಬ್ಬರಗಳ ಸಹಾಯಧನ ಹೆಚ್ಚಿಸಲು ಮುಂದಾಗಿದೆ. ಇದರಿಂದ ಕಂಪನಿಗಳಿಗೆ ಲಾಭವಾಗುತ್ತದೆ. ರಸಗೊಬ್ಬರ ಸಬ್ಸಿಡಿ ಹಣವನ್ನು ರೈತರ ಖಾತೆಗೆ ನೇರವಾಗಿ ಹಾಕಬೇಕು. ಇದರಿಂದ ರೈತರಿಗೆ ಅನುಕೂಲವಾಗುತ್ತದೆ. ಸರ್ಕಾರ ನೈಸರ್ಗಿಕ ಹೆಚ್ಚಿನ ಕೃಷಿಗೆ ಒತ್ತು ನೀಡಬೇಕು ಎಂದು ಆಗ್ರಹಿಸಿದ್ದಾರೆ.