ಬದನೆಕಾಯಿ 200ಗ್ರಾಂ
ಉಪ್ಪು ರುಚಿಗೆ ತಕ್ಕಷ್ಟು
ಎಣ್ಣೆ 1 ಚಮಚ
ಜೀರಿಗೆ ಅರ್ಧ ಚಮಚ
ಹಸಿ ಮೆಣಸಿನಕಾಯಿ 3
ಬೆಳ್ಳುಳ್ಳಿ ಎಸಳು 7-8
ಚಕ್ಕೆ ಸ್ವಲ್ಪ
ನೀರು
ಈರುಳ್ಳಿ 2-3
ಅರಿಶಿಣ ಪುಡಿ ಅರ್ಧ ಚಮಚ
ಸಾಸಿವೆ 1 ಚಮಚ
ಒಣಮೆಣಸು
ಕರಿಬೇವು ಸ್ವಲ್ಪ
ಲವಂಗ 4
ಕಡಲೆ ಹಿಟ್ಟು 2 ಚಮಚ
ಮಾಡುವ ವಿಧಾನ
ಬದನೆಕಾಯಿಯನ್ನು ಮೂರು ಭಾಗ ಮಾಡಿ ನೀರಿನಲ್ಲಿ ಹಾಕಿ. (ತೊಟ್ಟು ತೆಗೆಯಬೇಡಿ) ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಯನ್ನು ಉದ್ದುದ್ದವಾಗಿ ಕತ್ತರಿಸಿ.
ಈಗ ಪ್ಯಾನ್‌ಗೆ ಎಣ್ಣೆ ಹಾಕಿ ಬಿಸಿ ಮಾಡಿ ಸಾಸಿವೆ, ಜೀರಿಗೆ ಹಾಕಿ ಚಟ್‌ಪಟ್ ಶಬ್ದ ಬರುವಾಗ ಚಕ್ಕೆ, ಲವಂಗ ಹಾಕಿ ಕರಿಬೇವು ಹಾಕಿ ಕೆಲ ಸೆಕೆಂಡ್ ಹುರಿಯಿರಿ.
ನಂತರ ಬೆಳ್ಳುಳ್ಳಿ ಹಾಕಿ 2 ನಿಮಿಷ ಫ್ರೈ ಮಾಡಿ. ಈಗ ಈರುಳ್ಳಿ, ಹಸಿ ಮೆಣಸಿನಕಾಯಿ, ಬದನೆಕಾಯಿ ಹಾಕಿ ಫ್ರೈ ಮಾಡಿ. ನಂತರ ಒಂದು ಕಪ್ ನೀರು ಹಾಕಿ. ಈಗ ಉಪ್ಪು ಹಾಗೂ ಅರಿಶಿಣ ಸೇರಿಸಿ ಮಿಕ್ಸ್ ಮಾಡಿ.
ನಂತರ ಪ್ಯಾನ್ ಬಾಯಿ ಮುಚ್ಚಿ ಬೇಯಿಸಿ. ಬದನೆಕಾಯಿ ಬೆಂದು ಮೃದುವಾದ ಮೇಲೆ ಒಂದು ಬೌಲ್‌ನಲ್ಲಿ ಕಡಲೆಹಿಟ್ಟು ಹಾಕಿ ಅದಕ್ಕೆ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ ಆ ಮಿಶ್ರಣವನ್ನು ಪ್ಯಾನ್‌ಗೆ ಸೇರಿಸಿ.
ನಂತರ 5 ನಿಮಿಷ ಬೇಯಿಸಿ ಉಪ್ಪು ಸರಿಯಾಗಿದೆಯೇ ನೋಡಿ ಉರಿಯಿಂದ ಇಳಿಸಿ. ಈಗ ರೆಡಿಯಾದ ಬದನೆಕಾಯಿ ಮಸಾಲೆ ಕರಿಯನ್ನು ಚಪಾತಿ ಜೊತೆ ಸವಿಯಿರಿ.