ಮುಂಬೈ: ಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರ 50 ನೇ ಹುಟ್ಟುಹಬ್ಬದ ಸಂಭ್ರಮಾಚರಣೆ ಬುಧವಾರ ರಾತ್ರಿ ಮುಂಬೈನ ಯಶ್ ರಾಜ್ ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ನಡೆಯಿತು.
ಸಲ್ಮಾನ್ ಖಾನ್, ರಾಣಿ ಮುಖರ್ಜಿ, ಕಾಜೋಲ್, ಐಶ್ವರ್ಯಾ ಮತ್ತು ಅಭಿಷೇಕ್ ಬಚ್ಚನ್, ಅನುಷ್ಕಾ ಶರ್ಮಾ, ಶಾಹಿದ್ ಕಪೂರ್ ಮತ್ತು ಮೀರಾ ರಜಪೂತ್, ಜಾನ್ವಿ ಕಪೂರ್, ಸಾರಾ ಅಲಿ ಖಾನ್ ಮತ್ತು ಆರ್ಯನ್ ಖಾನ್ ಸೇರಿ ಹಲವಾರು ಸೆಲೆಬ್ರಿಟಿಗಳು ಹಾಜರಿದ್ದರು. ಒಬ್ಬರಿಗಿಂತ ಒಬ್ಬರು ಸುಂದರ ಉಡುಪುಗಳಲ್ಲಿ ಕಂಗೊಳಿಸುತ್ತಿದ್ದರು.
ಅವರ ಪೈಕಿ ಅನುಷ್ಕಾ ಸೂಪರ್- ಚಿಕ್ ಎಲಿಸಬೆಟ್ಟಾ ಫ್ರಾಂಚಿ ಡ್ರೆಸ್‌ನಲ್ಲಿ ಎದ್ದು ಕಾಣುತ್ತಿದ್ದರು. ಯಾರೇ ಆದರೂ ಆ ಕಪ್ಪು ಉಡುಪಿನಲ್ಲಿದ್ದ ಅನುಷ್ಕಾರನ್ನು ಒಮ್ಮೆಯಾದರೂ ನೋಡಿಯೇ ನೋಡಿರುತ್ತಾರೆ. ಎದೆ ಭಾಗದ ಮಧ್ಯ ತೆರೆದ ಕಪ್ಪು ನೀಳವಾದ ಉಡುಪಿನಲ್ಲಿ ಮೂವತ್ತನಾಲ್ಕು ವರ್ಷದ ಸುಂದರಿ, ತುಂಬು ಉತ್ಸಾಹದೊಂದಿಗೆ ಅಲ್ಲಿ ಓಡಾಡಿದ್ದರು.
ಆ ಉಡುಪಿನ ವಿನ್ಯಾಸವೇ ಗಮನಸೆಳೆಯುವಂಥದ್ದು. ಸೊಂಟದ ರೇಖೆಯಲ್ಲಿ ಚೇನ್ ಮತ್ತು ರೈನ್‌ಸ್ಟೋನ್‌ಗಳನ್ನು ಅಳವಡಿಸಲಾಗಿದೆ. ಫುಲ್ ಸ್ಲೀವ್ ಡ್ರೆಸ್‌ನ ಫಿಗರ್-ಹಗ್ಗಿಂಗ್ ಸ್ಕರ್ಟ್ ಒಂದು ಸೈಡ್ ಸ್ಲಿಟ್ ಆಗಿ ತೆರೆದುಕೊಂಡಿದೆ. ಇದು ಅನುಷ್ಕಾರನ್ನು ಕನಸಿನ ರಾಣಿಯಂತೆ ಬಿಂಬಿಸಿದೆ.
ಈ ಉಡುಪಿಗೆ ಪೂರಕವಾಗಿ ಅನುಷ್ಕಾ, ಸೊಗಸಾದ ಮಣಿಕಟ್ಟಿನ ಪಟ್ಟಿಯನ್ನು ಧರಿಸಿದ್ದರು. ಕೂದಲನ್ನು ಮೃದುವಾದ ಸುರುಳಿಗಳಲ್ಲಿ ಹೊಂದಿಸಿದ್ದರು. ಮುಖದ ಮೇಕಪ್‌ನಲ್ಲೂ ವಿಶೇಷತೆ ಇತ್ತು. ಮುಖದಲ್ಲಿ ತಾಮ್ರವರ್ಣ ಹೈಲೈಟ್ ಆಗಿತ್ತು.