ಮಾನ್ಸ್ಟರ್ ವೇವ್ ರೈಡಿಂಗ್ ಮೂಲಕ ಗಿನ್ನಿಸ್ ದಾಖಲೆ ನಿರ್ಮಿಸಿದ ಜರ್ಮನ್ ಸರ್ಫರ್ 27-05-2022 6:58AM IST / No Comments / Posted In: Latest News, Live News, International ಜರ್ಮನಿಯ ಸರ್ಫರ್ ಸೆಬಾಸ್ಟಿಯನ್ ಸ್ಟೀಡ್ಟ್ನರ್ ಅವರು ಮಂಗಳವಾರ 86-ಅಡಿ ಮಾನ್ಸ್ಟರ್ ವೇವ್ ರೈಡಿಂಗ್ ಗಿನ್ನಿಸ್ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಅಕ್ಟೋಬರ್ 2020 ರಲ್ಲಿ ಸ್ಟೀಡ್ಟ್ನರ್ ಅವರು ಪೋರ್ಚುಗಲ್‌ನ ಪ್ರೈಯಾ ಡೊ ನಾರ್ಟೆ, ನಜಾರೆ ಕರಾವಳಿಯಲ್ಲಿ 26.21 ಮೀಟರ್ (86 ಅಡಿ) ದೊಡ್ಡ ಅಲೆಯ ಮೂಲಕ ಸರ್ಫ್ ಮಾಡಿದಾಗ ದಾಖಲೆಯನ್ನು ಸ್ಥಾಪಿಸಿದ್ರು. ಈ ರೈಡ್ 2021 ರ ರೆಡ್ ಬುಲ್ ಬಿಗ್ ವೇವ್ ಅವಾರ್ಡ್ಸ್‌ನಲ್ಲಿ ಬಿಗ್ಗೆಸ್ಟ್ ಟೋ ಪ್ರಶಸ್ತಿಯನ್ನು ಗಳಿಸಿತು. ಅವರ ಅದ್ಭುತ ಸರ್ಫಿಂಗ್ ಸಾಧನೆಯ ವಿಡಿಯೋ ವೈರಲ್ ಆಗಿದ್ದು, ಇದನ್ನು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಟ್ವಿಟ್ಟರ್ ಪುಟದಲ್ಲಿ ಹಂಚಿಕೊಂಡಿದೆ. ಸ್ಟೀಡ್ಟ್ನರ್ ಅವರ ದಿಗ್ಭ್ರಮೆಗೊಳಿಸುವ ದಾಖಲೆಯನ್ನು ಸೆರೆಹಿಡಿಯಲಾಗಿದೆ. ಮೇ 24ರ 2022 ರಂದು ತೀರ್ಪುಗಾರರ ಸಮ್ಮುಖದಲ್ಲಿ ವಿಶೇಷ ಪ್ರಮಾಣಪತ್ರ ಸಮಾರಂಭದಲ್ಲಿ ಸಾಧನೆಯನ್ನು ಅಧಿಕೃತವಾಗಿ ಘೋಷಿಸಲಾಯಿತು. ಜಿಡಬ್ಲ್ಯೂಆರ್ ಪ್ರಕಾರ, 37 ವರ್ಷ ವಯಸ್ಸಿನ ಸ್ಟೀಡ್ಟ್ನರ್ ಅಲೆಗಳನ್ನು ಬೆನ್ನಟ್ಟಲು ತಮ್ಮ ಇಡೀ ಜೀವನವನ್ನು ಕಳೆದಿದ್ದಾರೆ. ಅವರು ಕೇವಲ 13 ವರ್ಷದವರಾಗಿದ್ದಾಗ ಹವಾಯಿಗೆ ತೆರಳಲು ನಿರ್ಧರಿಸಿದ್ರು. ಇದಕ್ಕಾಗಿ ತಮ್ಮ ಪೋಷಕರ ಮನವೊಲಿಸಲು ಅವರು ಮೂರು ವರ್ಷಗಳನ್ನು ತೆಗೆದುಕೊಂಡಿದ್ದಾರೆ. ಆದರೆ 16 ನೇ ವಯಸ್ಸಿನಲ್ಲಿ ಅವರು ಸರ್ಫಿಂಗ್‌ನಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ನಿರ್ಧರಿಸಿದ್ರು. New record: Largest wave surfed (unlimited) – male 🌊 26.21 m (86 feet) by Germany's @SebastianSurfs 📽️ Jorge Leal + @wsl pic.twitter.com/Cb1c8vKP3Z — Guinness World Records (@GWR) May 24, 2022