ವಾರದ ಟ್ರಿಪ್ ಗೆ ಹೊರಟಾಗ ಮನೆಯ ಭದ್ರತೆ ಬಗ್ಗೆ ಎಲ್ಲರೂ ಗಮನ ನೀಡ್ತಾರೆ. ಬಾಗಿಲನ್ನು ಭದ್ರವಾಗಿ ಹಾಕಿದ್ದೀವಾ ಎಂಬುದನ್ನು ನೋಡುವ ಜೊತೆಗೆ ಕರೆಂಟ್ ಸುಮ್ಮನೆ ಉರಿಯದಿರಲಿ ಎನ್ನುವ ಕಾರಣಕ್ಕೆ ಎಲ್ಲ ಲೈಟ್ ಪರಿಶೀಲಿಸಿ ಹೋಗ್ತೇವೆ. ಕೆಲವರು ಫ್ರಿಜ್ ಸ್ವಿಚ್ ಕೂಡ ಬಂದ್ ಮಾಡಿ ಹೋಗ್ತಾರೆ.
ಮನೆಯಿಂದ ಹೊರಗೆ ಹೋಗುವಾಗ ಫ್ರಿಜ್ ಬಂದ್ ಮಾಡುವುದು ಒಳ್ಳೆಯದಲ್ಲ. ಇದರ ಬದಲು ಏನೆಲ್ಲ ಮಾಡಬೇಕು ಅನ್ನೋದನ್ನು ನಾವು ಹೇಳ್ತೇವೆ ಕೇಳಿ.
ಮನೆಯಿಂದ ಹೊರಗೆ ಹೋಗುವ ಮೊದಲು ಫ್ರಿಜ್ ನಲ್ಲಿ ಒಂದು ನಾಣ್ಯವನ್ನಿಡಿ. ಒಂದು ಗ್ಲಾಸ್ ಗೆ ಐಸ್ ಹಾಕಿ ಅದರಲ್ಲಿ ಒಂದು ರೂಪಾಯಿ ನಾಣ್ಯವನ್ನಿಡಿ. ಮನೆಗೆ ಬಂದಾಗ ಗ್ಲಾಸ್ ಕೆಳಗೆ ಅಥವಾ ಮಧ್ಯ ನಾಣ್ಯ ಸಿಕ್ಕಿದರೆ ಕರೆಂಟ್ ಹೋಗಿತ್ತು ಎಂಬುದನ್ನು ಅರ್ಥ ಮಾಡಿಕೊಳ್ಳಿ.
ಕರೆಂಟ್ ಹೋದಲ್ಲಿ ಫ್ರಿಜ್ ನಲ್ಲಿರುವ ಆಹಾರ ಹಾಳಾಗುತ್ತದೆ. ಹಾಗಾಗಿ ಫ್ರಿಜ್ ನಲ್ಲಿಟ್ಟ ಆಹಾರ ಸೇವನೆ ಮಾಡಬೇಡಿ. ಒಂದು ವೇಳೆ ಫ್ರಿಜ್ ನಲ್ಲಿ ಆಹಾರವಿಡಲಿಲ್ಲ ಎಂದಾದಲ್ಲಿ ಆಹಾರದ ಬದಲು ನೀರು ತುಂಬಿದ ಬಾಟಲಿಗಳನ್ನು ಫ್ರಿಜ್ ನಲ್ಲಿಡಿ. ಹಾಗೆ ಫ್ರಿಜ್ ಗೋಡೆಗೆ ಹತ್ತಿರವಿರದಂತೆ ನೋಡಿಕೊಳ್ಳಿ. ಕರೆಂಟ್ ಹೋಗಿ ಫ್ರಿಜ್ ನಿಂದ ನೀರು ಹೊರಗೆ ಬಂದ್ರೆ ಅದು ಹರಿದು ಹೋಗಲು ಅವಕಾಶವಿರಲಿ.
ಹೊರಗೆ ಹೋಗುವ ಮುನ್ನ ಫ್ರಿಜ್ ಸ್ವಿಚ್ ಪರಿಶೀಲನೆ ಮಾಡಿ. ಸ್ವಿಚ್ ಅಥವಾ ಪ್ಲಗ್, ವೈರ್ ಹಾಳಾಗಿದ್ದರೆ ಅದನ್ನು ಸರಿಪಡಿಸಿ ಹೋಗಿ. ಹಾಗೆ ಬಾಗಿಲು ಸರಿಯಾಗಿ ಬಿದ್ದಿದೆಯೇ ಎಂಬುದನ್ನು ನೋಡಿಕೊಳ್ಳಿ. ಬಾಗಿಲು ತೆರೆದಿದ್ದರೆ ಫ್ರಿಜ್ ಸಾಮಾನ್ಯಕ್ಕಿಂತ ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಇದರಿಂದ ಜಾಸ್ತಿ ಕರೆಂಟ್ ಬಳಕೆಯಾಗುತ್ತದೆ.