ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಹಾಲಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕುಟುಂಬ ಸುಮಾರು 50 ವರ್ಷಗಳಿಂದ ವಾಸಿಸುತ್ತಿದ್ದ ತಮ್ಮ ಪೂರ್ವಜರ ಮನೆಯನ್ನು ತೊರೆದಿದ್ದಾರೆ.
ಹಾಗೆಂದ ಮಾತ್ರಕ್ಕೆ ಅವರು ಕುಟುಂಬದೊಂದಿಗೆ ಯಾವುದೇ ತಕರಾರು ಮಾಡಿಕೊಂಡು ಹೊರ ಹೋಗಿದ್ದಾರೆ. ಎಂದರ್ಥವಲ್ಲ.
ಬದಲಿಗೆ ಸುಮಾರು 40 ಕೋಟಿ ರೂಪಾಯಿ ಮೌಲ್ಯದ ಭವ್ಯ ಬಂಗಲೆಯನ್ನು ಖರೀದಿಸಿ ಅಲ್ಲಿಗೆ ತಮ್ಮ ವಾಸ್ತವ್ಯವನ್ನು ಬದಲಿಸಿದ್ದಾರೆ.
ಕೋಲ್ಕತ್ತಾದ ಬೆಹಲಾದ ಬೈರನ್ ರಾಯ್ ರಸ್ತೆಯಲ್ಲಿನ ತಮ್ಮ ಪೂರ್ವಜರ ಮನೆಯಲ್ಲಿ ಸೌರವ್ ಗಂಗೂಲಿಯವರ ಕುಟುಂಬ ಕಳೆದ ಐದು ದಶಕಗಳಿಂದ ವಾಸವಾಗಿತ್ತು.
ಆದರೆ, ಗಂಗೂಲಿ ಇತ್ತೀಚೆಗೆ ಕೋಲ್ಕತ್ತದಲ್ಲಿಯೇ ಅತ್ಯಂತ ಶ್ರೀಮಂತ ಪ್ರದೇಶ ಎಂದೇ ಖ್ಯಾತಿಯಾಗಿರುವ ಲೋಯರ್ ರೋಡಾನ್ ಸ್ಟ್ರೀಟ್ ನಲ್ಲಿ 40 ಕೋಟಿ ರೂಪಾಯಿಗೆ ಭವ್ಯ ಬಂಗಲೆಯನ್ನು ಖರೀದಿಸಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರ ಭೇಟಿ ಬಳಿಕ ತೆಲಂಗಾಣ ಸಿಎಂ ಕೆಸಿಆರ್ ಕುತೂಹಲದ ಹೇಳಿಕೆ: ತೃತೀಯ ರಂಗ ರಚನೆ ಬಗ್ಗೆ ಚರ್ಚೆ
ಈ ಐಶಾರಾಮಿ ಪ್ರದೇಶದಲ್ಲಿ ಗಂಗೂಲಿಯೊಬ್ಬರೇ ಅಲ್ಲ, ಹಲವಾರು ಖ್ಯಾತನಾಮ ಕ್ರಿಕೆಟಿಗರು, ರಾಜಕಾರಣಿಗಳು, ಚಿತ್ರನಟ-ನಟಿಯರು ಮನೆಗಳನ್ನು ಹೊಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗಂಗೂಲಿ, ಇದು ನನ್ನ ಸ್ವಂತ ಮನೆಗೆ ಬಂದಿರುವುದಕ್ಕೆ ನನಗೆ ಸಂತಸವಾಗುತ್ತಿದೆ. ನಾನು ಹಲವು ವರ್ಷಗಳಿಂದ ಇದಕ್ಕಾಗಿ ಕನಸು ಕಂಡಿದ್ದೆ. ಆದರೆ, ನಾನು ಕಳೆದ 48 ವರ್ಷಗಳ ಕಾಲ ವಾಸವಿದ್ದ ನನ್ನ ಪೂರ್ವಜರ ಮನೆಯನ್ನು ಬಿಟ್ಟು ಬಂದಿರುವುದಕ್ಕೆ ಮನಸ್ಸು ಭಾರವಾಗಿದೆ ಎಂದಿದ್ದಾರೆ.