alex Certify ನಾಯಿಯೊಂದಿಗೆ IAS ಅಧಿಕಾರಿ ನಿತ್ಯ ವಾಕ್; ಕ್ರೀಡಾಪಟುಗಳು ಕ್ರೀಡಾಂಗಣದಿಂದ ಹೊರಕ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಯಿಯೊಂದಿಗೆ IAS ಅಧಿಕಾರಿ ನಿತ್ಯ ವಾಕ್; ಕ್ರೀಡಾಪಟುಗಳು ಕ್ರೀಡಾಂಗಣದಿಂದ ಹೊರಕ್ಕೆ

ಐಎಎಸ್ ಅಧಿಕಾರಿ ತನ್ನ ನಾಯಿಯೊಂದಿಕೆ ವಾಕ್ ಮಾಡಲು ಕ್ರೀಡಾಪಟುಗಳನ್ನು ಹೊರಗೆ ಕಳಿಸಿ ಕ್ರೀಡಾಂಗಣ ಖಾಲಿ ಮಾಡಿಸಿರುವ ವಿಲಕ್ಷಣ ಘಟನೆ ದೆಹಲಿಯಲ್ಲಿ ನಡೆದಿದೆ.

ದೆಹಲಿಯ ತ್ಯಾಗರಾಜ್ ಸ್ಟೇಡಿಯಂನಲ್ಲಿ ಕ್ರೀಡಾಪಟುಗಳು ಮತ್ತು ತರಬೇತುದಾರರು ಸಾಮಾನ್ಯಕ್ಕಿಂತ ಮುಂಚಿತವಾಗಿ ಅಂದರೆ ಸಂಜೆ 7 ಗಂಟೆಗೆ ತರಬೇತಿಯನ್ನು ಮುಗಿಸಲು ಒತ್ತಾಯಿಸುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ. ಇದಕ್ಕೆ ಕಾರಣ ಐಎಎಸ್ ಅಧಿಕಾರಿ.

ದೆಹಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಕಂದಾಯ) ಸಂಜೀವ್ ಖಿರ್ವಾರ್ ಸುಮಾರು ಅರ್ಧ ತಾಸು ತಮ್ಮ‌ ನಾಯಿಗೆ ವಾಕ್ ಮಾಡಿಸುತ್ತಾರೆ.

ನಾವು ಮೊದಲು ಲೈಟ್ ಬೆಳಕಿನಲ್ಲಿ ರಾತ್ರಿ 8-8.30 ರವರೆಗೆ ತರಬೇತಿ ನೀಡುತ್ತಿದ್ದೆವು. ಆದರೆ ಈಗ ಅಧಿಕಾರಿಯು ತನ್ನ ನಾಯಿಯನ್ನು ವಾಕ್ ಮಾಡಿಸಲು ಬರುವುದರಿಂದ ನಮಗೆ ಸಂಜೆ 7 ಗಂಟೆಗೆ ಮೈದಾನದಿಂದ ಹೊರಡಲು ಕೇಳಲಾಗುತ್ತದೆ. ನಮ್ಮ ತರಬೇತಿ ಮತ್ತು ಅಭ್ಯಾಸದ ದಿನಚರಿ ಅಸ್ತವ್ಯಸ್ತಗೊಂಡಿದೆ ಎಂದು ತರಬೇತುದಾರರೊಬ್ಬರು ಬೇಸರ ಹೊರಹಾಕಿದ್ದಾರೆ.

1994-ಬ್ಯಾಚ್ ಐಎಎಸ್ ಅಧಿಕಾರಿ ಖಿರ್ವಾರ್ ಅವರು ಈ ಆರೋಪ ಅಲ್ಲಗಳೆದಿದ್ದಾರೆ. “ಇದು ಸಂಪೂರ್ಣವಾಗಿ ತಪ್ಪು” ಎಂದು ವಿವರಿಸಿದ್ದಾರೆ. “ಕೆಲವೊಮ್ಮೆ” ತಮ್ಮ‌ ನಾಯಿ ಕರೆದೊಯ್ಯುತ್ತಾರೆ ಎಂಬುದನ್ನು ಒಪ್ಪಿಕೊಂಡರು ಆದರೆ ಇದು ಕ್ರೀಡಾಪಟುಗಳ ಅಭ್ಯಾಸವನ್ನು ಅಡ್ಡಿಪಡಿಸುತ್ತದೆ ಎಂದು ನಿರಾಕರಿಸಿದರು.

2010 ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕಾಗಿ ನಿರ್ಮಿಸಲಾದ ಕೇಂದ್ರೀಯ ಕ್ರೀಡಾ ಸಂಕೀರ್ಣವು ರಾಷ್ಟ್ರೀಯ ಮತ್ತು ರಾಜ್ಯ ಕ್ರೀಡಾಪಟುಗಳು ಮತ್ತು ಫುಟ್‌ಬಾಲ್ ಆಟಗಾರರನ್ನು ಆಕರ್ಷಿಸುವಂತ ಸೌಲಭ್ಯಗಳನ್ನು ಹೊಂದಿದೆ.

ನಾವು ಸಂಜೆ 7 ಗಂಟೆಗೆ ಕ್ರೀಡಾಂಗಣ ಮುಚ್ಚಬೇಕು. ಸರ್ಕಾರಿ ಕಚೇರಿಯ ಸಮಯವನ್ನು ಎಲ್ಲಿ ಬೇಕಾದರೂ ಕಾಣಬಹುದು. ಇದು ದೆಹಲಿ ಸರ್ಕಾರದ ಅಡಿಯಲ್ಲಿ ಸರ್ಕಾರಿ ಕಚೇರಿಯಾಗಿದೆ. ಅಧಿಕಾರಿ ನಾಯಿ ವಾಕ್ ಮಾಡಿಸುವ ಯಾವುದೇ ವಿಷಯದ ಬಗ್ಗೆ ನನಗೆ ತಿಳಿದಿಲ್ಲ. ನಾನು ಸಂಜೆ 7 ಗಂಟೆಗೆ ಕ್ರೀಡಾಂಗಣದಿಂದ ಹೊರಡುತ್ತೇನೆ ಮತ್ತು ನನಗೆ ತಿಳಿದಿಲ್ಲ ಎಂದು ಅಲ್ಲಿನ ಅಧಿಕಾರಿ ಚೌಧರಿ ಹೇಳಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...